ಕುಮಟಾ: ತಾಲೂಕಿನಲ್ಲಿ ಇಂದು ಏಳು ಕರೊನಾ ಪ್ರಕರಣ ದಾಖಲಾಗಿದೆ. ತಾಲೂಕಿನ ತಲಗೋಡ, ಕೂಜಳ್ಳಿ, ಮಾಸೂರು, ನಾಡುಮಾಸ್ಕೇರಿ, ಮಂಗೊಡ್ಲ, ಪಟ್ಟಣದ ಗುರುನಗರ, ಹೆರವಟ್ಟಾದ ಸಾಣಿಯಮ್ಮ ದೇವಸ್ಥಾನದ ಸಮೀಪ ತಲಾ ಒಂದೊoದು ಪ್ರಕರಣ ದಾಖಲಾಗಿದೆ. ತಲಗೋಡದ 60 ವರ್ಷದ ವೃದ್ದೆ, ಹೆರವಟ್ಟಾದ ಸಾಣಿಯಮ್ಮ ದೇವಸ್ಥಾನದ ಸಮೀಪದ 38 ವರ್ಷದ ಮಹಿಳೆ, ಪಟ್ಟಣದ ಗುರುನಗರದ 45 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.
ಕೂಜಳ್ಳಿಯ 27 ವರ್ಷದ ಮಹಿಳೆ, ಮಾಸೂರಿನ 31 ವರ್ಷದ ಮಹಿಳೆ, ನಾಡುಮಾಸ್ಕೇರಿಯ 56 ವರ್ಷದ ಮಹಿಳೆ, ಮಂಗೊಡ್ಲದ 48 ವರ್ಷದ ಪುರುಷನಲ್ಲಿ ಕರೋನಾ ಪತ್ತೆಯಾಗಿದೆ. ಇಂದು 7 ಹೊಸ ಪ್ರಕರಣ ಪತ್ತೆಯಾದ ಬೆನ್ನಲ್ಲೆ, ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,740ಕ್ಕೆ ಏರಿಕೆಯಾಗಿದೆ.
ಹೊನ್ನಾವರದಲ್ಲಿ ಎಂಟು ಪಾಸಿಟಿವ್:
ಹೊನ್ನಾವರ: ತಾಲೂಕಿನ ಇಂದು 8 ಜನರಲ್ಲಿ ಕರೊನಾ ಪಾಸಿಟಿವ್ ಬಂದಿದೆ. ಎಲ್ಲಾ ಪ್ರಕರಣಗಳು ಗ್ರಾಮೀಭಾಗದಲ್ಲಿಯೆ ಕಾಣಿಸಿಕೊಂಡಿದೆ. ಹೊಸಾಕುಳಿ-ಹೊದ್ಕೆಶಿರೂರ-ಮರಬಳ್ಳಿ ಬಾಗದಲ್ಲಿ ಪಾಸಿಟಿವ್ ಪತ್ತೆಯಾಗಿದೆ.
ಹೊಸಾಕುಳಿಯ 80 ವರ್ಷದ ಮಹಿಳೆ, 11 ವರ್ಷದ ಬಾಲಕ, ಹೊದ್ಕೆಶಿರೂರಿನ 37 ವರ್ಷದ ಪುರುಷ, 60 ವರ್ಷದ ಪುರುಷ, 30 ವರ್ಷದ ಯುವತಿ, 58 ವರ್ಷದ ಮಹಿಳೆ, ಮರಬಳ್ಳಿಯ 74 ವರ್ಷದ ಪುರುಷ 15 ವರ್ಷದ ಬಾಲಕ ಸೇರಿ ಎಂಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ .
ಯಲ್ಲಾಪುರದಲ್ಲಿಂದು ಮೂವರಿಗೆ ಕರೊನಾ
ಯಲ್ಲಾಪುರ: ತಾಲೂಕಿನಲ್ಲಿ ಮಂಗಳವಾರ ಮೂವರಿಗೆ ಕೊರೊನಾ ಸೋಂಕು ಧೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 58 ಕ್ಕೆ ಏರಿಕೆಯಾಗಿದೆ. ಇಂದು ನಂದೊಳ್ಳಿ, ದೇಹಳ್ಳಿ ಹಾಗೂ ಮಂಜುನಾಥನಗರಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ
ಜಿಲ್ಲೆಯಲ್ಲಿಂದು 40 ಕೇಸ್:
ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 40 ಕರೊನಾ ಕೇಸ್ ದಾಖಲಾಗಿದ್ದು, 146 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13060ಕ್ಕೆ ಏರಿಕೆಯಾಗಿದೆ. ಕಾರವಾರ 5,ಭಟ್ಕಳ 1, ಶಿರಸಿಯಲ್ಲಿ 2 ಕೇಸ್ ದಾಖಳಾಗಿದೆ.
ವಿಸ್ಮಯ ನ್ಯೂಸ್ ನಾಗೇಶ ದೀವಗಿ, ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ
ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ.
ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.