Uttara Kannada
Trending

ಗೋದಿಬಣ್ಣ, ಸಾಧಾರಣ ಮೈಕಟ್ಟು: ಕಾಣೆಯಾಗಿದ್ದಾಳೆ

ಮಗುವಿನೊಂದಿಗೆ ಮಹಿಳೆ ನಾಪತ್ತೆ
ಶಿರಸಿಯಲ್ಲಿ ಪ್ರಕರಣ ದಾಖಲು

ಶಿರಸಿ: ಮಹಿಳೆಯೊಬ್ಬಳು ತನ್ನ ಮಗಳನ್ನು ಕರೆದುಕೊಂಡು ಮನೆಯಿಂದ ಹೋದವಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ. ಮನೆಗೂ ಬಾರದೇ, ಸಂಬoಧಿಕರ ಮನೆಗೂ ಹೋಗದೇ ನಾಪತ್ತೆಯಾಗಿರುವ ಬಗ್ಗೆ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಾಗಿದೆ.


ಅಕ್ಟೋಬರ 27 ರಂದು 6 ಗಂಟೆಯಿoದ 28 ಅಕ್ಟೋಬರ್ ರಂದು ಮಧ್ಯಾಹ್ನ 4 ಗಂಟೆಯ ಅವಧಿಯಲ್ಲಿ ಸೌಮ್ಯಾ ರಾಘವೇಂದ್ರ ಬೋರಕರ ಮತ್ತು ಅವರ ಮಗಳಾದ ಸಂಜನಾ ರಾಘವೇಂದ್ರ ಬೋರಕರ ಇವರು ಶಿರಸಿಯ ಹನುಮಗಿರಿಯಲ್ಲಿರುವ ಮನೆಯಿಂದ ಎಲ್ಲಿಯೋ ಹೋಗಿದ್ದು, ಮರಳಿ ಮನೆಗೆ ಬಂದಿಲ್ಲವಾಗಿದೆ. ಕಾಣೆಯಾಗಿರುವ ಮಹಿಳೆಯು 32 ವರ್ಷದವಳಾಗಿದ್ದು, 5.0 ಅಡಿ ಎತ್ತರ, ಸಾದರಣ ಮೈಕಟ್ಟು, ಕೋಲು ಮುಖ, ಗೋಧಿ ಮೈ ಬಣ್ಣ ಮತ್ತು ಕನ್ನಡ ಮತ್ತು ಉರ್ದು ಭಾಷೆಯನ್ನು ಮಾತನಾಡುತ್ತಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.


ಈ ರೀತಿಯ ಚಹರೆಯನ್ನು ಹೊಂದಿರುವ ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ತಕ್ಷಣವೇ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08384- 236330 ಅಥವಾ 9480805255 ಗೆ ಸಂಪರ್ಕಿಸುವoತೆ ಮಾರುಕಟ್ಟೆ ಪೊಲೀಸರು ತಿಳಿಸಿದ್ದಾರೆ.


ವಿಸ್ಮಯ ನ್ಯೂಸ್, ಶಿರಸಿ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Related Articles

Back to top button