ಉತ್ತರಕನ್ನಡದಲ್ಲಿ ಇಂದು 56 ಕರೊನಾ ಕೇಸ್ ದಾಖಲು

ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 11 ಕರೋನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಅಂತ್ರವಳ್ಳಿಯಲ್ಲಿ 3, ತಲಗೋಡ್ 3, ಮಾದನಗೇರಿ 2 ಸೇರಿದಂತೆ ಬರ್ಗಿ, ಹಿರೇಗುತ್ತಿ, ಮುಂತಾದ ಭಾಗಗಳಲ್ಲಿ ಕರೋನಾ ಕೇಸ್ ಪತ್ತೆಯಾಗಿದೆ.

ಅಂತ್ರವಳ್ಳಿಯ 50 ವರ್ಷದ ಪುರುಷ, 43 ವರ್ಷದ ಮಹಿಳೆ, 18 ವರ್ಷದ ಯುವತಿ, ತಲಗೋಡ್‌ನ 46 ವರ್ಷದ ಪುರುಷ, 38 ವರ್ಷದ ಮಹಿಳೆ, 17 ವರ್ಷದ ಬಾಲಕಿ, ಮಾದನಗೇರಿಯ 47 ವರ್ಷದ ಪುರುಷ, 10 ವರ್ಷದ ಬಾಲಕಿ, ಬರ್ಗಿಯ 64 ವರ್ಷದ ಮಹಿಳೆ ಹಾಗೂ ಕುಮಟಾದ 64 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಇಂದು 11 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,788ಕ್ಕೆ ಏರಿಕೆಯಾಗಿದೆ.

ಹೊನ್ನಾವರದಲ್ಲಿ ಯಾವುದೇ ಕೇಸ್ ಇಲ್ಲ:

ಹೊನ್ನಾವರ : ಇಂದು ಒಂದು ಕೇಸ್ ದಾಖಲಾಗಿದೆ. ಪಟ್ಟಣದ 72 ವರ್ಷದ ಮಹಿಳೆಗೆ ಮಂಗಳೂರು ಖಾಸಗಿ ಆಸ್ಪಗೆ ತೆರಳಿದ ಸಂದರ್ಭದಲ್ಲಿ ಸೋಂಕು ಕಂಡುಬAದಿದೆ. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಬ್ಬರು ಡಿಸ್ಚಾರ್ಜ್ ಆಗಿದ್ದಾರೆ. 21 ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಶಿರಸಿಯಲ್ಲಿ 14 ಪಾಸಿಟಿವ್

ಶಿರಸಿ: ತಾಲೂಕಿನಲ್ಲಿ ಸೋಮವಾರ 14 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, 10 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇಂದು ವಿದ್ಯಾಗಿರಿಯಲ್ಲಿ 1, ನಾರಾಯಣಗುರುನಗರದಲ್ಲಿ 1, ವಾನಳ್ಳಿಯಲ್ಲಿ 2, ಗೌಳಿಗಲ್ಲಿಯಲ್ಲಿ 1, ಹುಬ್ಬಳ್ಳಿ ರಸ್ತೆಯಲ್ಲಿ 5, ಮುಸ್ಲಿಂ ಗಲ್ಲಿಯಲ್ಲಿ 1, ಸುಪ್ರಸನ್ನ ನಗರದಲ್ಲಿ 1, ಬಾಲಿಕೊಪ್ಪದ ಇಬ್ಬರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.

ಜಿಲ್ಲೆಯಲ್ಲಿಂದು 56 ಕರೊನಾ ಕೇಸ್

ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 56 ಕರೊನಾ ಕೇಸ್ ದಾಖಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ13,276ಕ್ಕೆ ಏರಿಕೆಯಾಗಿದೆ. ಭಟ್ಕಳ 5, ಸಿದ್ದಾಪುರ 3, ಯಲ್ಲಾಪುರದಲ್ಲಿ 8 ಕೇಸ್ ದಾಖಲಾಗಿದೆ. ಜಿಲ್ಲೆಯಲ್ಲಿ 401 ಸಕ್ರೀಯ ಪ್ರಕರಣಗಳಿವೆ.

ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ, ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ

Exit mobile version