Uttara Kannada
Trending

ಅನಾಥ ವ್ಯಕ್ತಿಗೆ ಸಿಕ್ಕಿತು ಆಶ್ರಯ

ಭಟ್ಕಳ : ಭಟ್ಕಳದ ಅನಾಥ ವ್ಯಕ್ತಿ ಅಸ್ವಸ್ಥ ಗೊಂಡು ತಾಲೂಕಾಸ್ಪತ್ರೆಗೆ ದಾಖಲಿಸಲಾಗಿತ್ತು. ಯಾರು ವಾರಸುದಾರಲ್ಲಿದ ಕಾರಣ ಭಟ್ಕಳ ಪೊಲೀಸರ ಕೋರಿಕೆ ಮೇರೆಗೆ ಸೋಮವಾರ ಸಿದ್ದಾಪುರದ ಪ್ರಚಲಿತ ಆಶ್ರಯದಾಮಕ್ಕೆ ಅನಾಥ ವ್ಯಕ್ತಿಯನ್ನು ಕೊಂಡೊಯ್ಯಲಾಗಿದೆ.

ಈತ ತಾಲೂಕಿನ ಬೆಳೆಕೆ ಸೋಮಯ್ಯ ನಾಗಪ್ಪ ಮೊಗೇರ ಎಂದು ತಿಳಿದು ಬಂದಿದೆ.. ಈತ ಕೆಲದಿನಗಳಿಂದ ತಾಲೂಕಿನ ಸುತ್ತಮುತ್ತ ಅನಾಥ ಸ್ಥಿತಿಯಲ್ಲಿ ಅಲೆದಾಡುತ್ತ ಅಸ್ವಸ್ಥ ಸ್ಥಿತಿಯಲ್ಲಿದ್ದವನನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು . ನಂತರ ಭಟ್ಕಳ ನಗರ ಠಾಣೆ ಹಾಗೂ ಗ್ರಾಮೀಣ ಠಾಣೆಯ ಪೊಲೀಸರು ಈ ವ್ಯಕ್ತಿಯ ಬಗ್ಗೆ ಬೆಳೆಕೆ ಸೋದಿಗದ್ದೆ ಭಾಗದಲ್ಲಿ ವಿಚಾರಿಸಿದಾಗ ವಾರಸುದಾರರು ಇಲ್ಲವಾಗಿರುವುದು ತಿಳಿದು ಬಂದಿದೆ.

ಭಟ್ಕಳ ನಗರ ಠಾಣೆ ಹಾಗೂ ಗ್ರಾಮೀಣ ಠಾಣೆ ಪೊಲೀಸರ ಸಮ್ಮುಖದಲ್ಲಿ ಸೋಮವಾರ ಸಿದ್ದಾಪುರದ ಪ್ರಚಲಿತ ಆಶ್ರಯದಾಮದ ಮುಖ್ಯಸ್ಥ ನಾಗರಾಜ ನಾಯ್ಕ ಅವರೊಂದಿಗೆ ಕಳುಹಿಸಿ ಕೊಡಲಾಗಿದೆ

ಈ ಸಂದರ್ಭದಲ್ಲಿ ಗ್ರಾಮೀಣ ಠಾಣೆ ಮತ್ತು ನಗರ ಠಾಣೆ ಪೋಲಿಸರಾದ ಎ.ಎಸ್.ಐ.ಗಳಾದ ನವೀನ್ ಬೋರ್ಕರ್,ಗೋಪಾಲ ನಾಯಕ, ಕೃಷ್ಣಾದ ನಾಯ್ಕ, ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮಾತ , ಡಾ. ಸತೀಶ ಮುಂತಾದವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ.

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button