ಶಿರಸಿಯಲ್ಲಿ ಶಂಕಿತ ಉಗ್ರನ ಬಂಧನ

ಉಗ್ರ ಸಂಘಟನೆಯೊoದಿಗೆ ನಂಟು ಹಿನ್ನಲೆ
ಎನ್‌ಐಎ ಕಾರ್ಯಾಚರಣೆ

ಶಿರಸಿ: ಉತ್ತರಕನ್ನಡ ಅತ್ಯಂತ ಶಾಂತಿಯುತ ಜಿಲ್ಲೆಯಾಗಿ ಹೆಸರು ಪಡೆದಿದೆ. ಆದರೆ, ಈ ಪ್ರಜ್ಞಾವಂತರ ಮತ್ತು ಶಾಂತಿಯ ಜಿಲ್ಲೆಯಲ್ಲಿ ಈಗ ಉಗ್ರಾತಂಕ ಮನೆಮಾಡಿದೆ. ಉಗ್ರರ ಜಾಡು ಜಿಲ್ಲೆಯಲ್ಲಿ ಹರಡಿದೆ ಎಂಬ ಆಘಾತಕಾರಿ ಮಾಹಿತಿ ಲಭಿಸಿದೆ. ಇದು ಜಿಲ್ಲೆಯ ಜನರನ್ನು ಆತಂಕ್ಕೆ ದೂಡಿದೆ.

ಪಾಕಿಸ್ತಾನದ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾದ ಶಿರಸಿಯ ಯುವಕನೊರ್ವವನ್ನು ರಾಷ್ಟ್ರೀಯ ತನಿಖಾ ದಳವದರು (NIA.) ಬಂಧಿಸಿ, ವಿಚಾರಣೆಗೆ ಕರೆದೊಯ್ದಿದ್ದಾರೆ. 
ಈ ಹಿಂದೆ ಇದೇ ವ್ಯಕ್ತಿಯನ್ನು ತನಿಖಾ ದಳವದರು ಮೂರು ಬಾರಿ ವಿಚಾರಣೆ ನಡೆಸಿದ್ದರು. ಅರೆಕೊಪ್ಪಕ್ಕೆ ಭೇಟಿ ನೀಡಿದ್ದ ಎನ್.ಐ.ಎ. ಸಿಬ್ಬಂದಿಗಳು ಮಂಗಳವಾರ ಸಂಜೆ ಆರೋಪಿಯನ್ನು ಬಂಧಿಸಿದ್ದಾರೆ. 


ಶಿರಸಿ ತಾಲೂಕಿನ ಅರೆಕೊಪ್ಪದ ಸಯ್ಯದ್ ಇದ್ರೀಸ್ ಸಬಿ ಸಾಬ ಮುನ್ನಾ (25) ಬಂಧಿತ ಆರೋಪಿಯಾಗಿದ್ದಾನೆ. ಮಂಗಳವಾರ ಸಂಜೆ ಮನೆಯಿಂದಲೇ ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜಾರು ಪಡಿಸಿ ಬುಧವಾರ ಬೆಳಿಗ್ಗೆ ಪಶ್ಚಿಮ ಬಂಗಾಳಕ್ಕೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.


ವಿಸ್ಮಯ ನ್ಯೂಸ್ ಶಿರಸಿ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ.

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version