Trending

ಸೇತುವೆಯಿಂದ ಪಲ್ಟಿಹೊಡೆದು ಕೆಳಗೆ ಬಿದ್ದ ಕಾರು

ಸ್ಥಳದಲ್ಲೇ ಓರ್ವ ಸಾವು
ಮೂವರು ಗಂಭೀರವಾಗಿ ಗಾಯ

[sliders_pack id=”1487″]

ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ಹಡಿನಬಾಳದಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನವೊಂದು ಸೇತುವೆ ಕೆಳಗೆ ಸಿನಿಮೀಯ ರೀತಿಯಲ್ಲಿ ಪಲ್ಟಿಯಾಗಿ ಓರ್ವ ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಗುರುವಾರ ಬೆಳಿಗಿನ ಜಾವ ಸಂಭವಿಸಿದೆ. ಶಿವಮೊಗ್ಗದಿಂದ ಹೊನ್ನಾವರ ಮಾರ್ಗವಾಗಿ ಗೋವಾಕ್ಕೆ ಚಲಿಸುತ್ತಿದ್ದ ಎರಡು ಯುವ ಜೋಡಿಗಳು ಕರೆದೊಯ್ಯುತ್ತಿದ್ದ ಕಾರ್ ಹಡಿನಬಾಳ ಸೇತುವೆ ಎಡಭಾಗದಲ್ಲಿಂದ ರಸ್ತೆ ಬಿಟ್ಟು ಸೇತುವೆ ಅಡಿಯಲ್ಲಿರುವ ರಸ್ತೆಗೆ ಬಿದ್ದಿದೆ. ವಾಹನದಲ್ಲಿ ಚಾಲಕನು ಸೇರಿ ನಾಲ್ವರು ಪ್ರಯಾಣಿಸುತ್ತಿದ್ದರು.


ಕಾರ್‌ನಲ್ಲಿದ್ದ ಪ್ರಯಾಣಿಕ ರಾಹುಲ್(32) ಎನ್ನುವವರು ತಾಲೂಕ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಇನ್ನುಳಿದ ಪ್ರಯಾಣಿಕರಾದ ವಂದನಾ ಹಾಗೂ ನೇಹಾ ಮತ್ತು ಕಾರು ಚಾಲಕ ಶರತಕುಮಾರ್ ಎನ್ನುವವರು ಗಾಯಗೊಂಡಿದ್ದಾರೆ. ಇದರಲ್ಲಿ ನೇಹಾ ಎನ್ನುವ ಯುವತಿ ಸ್ಥಿತಿ ಗಂಭೀರವಾಗಿದೆ.


ಸ್ಥಳಕ್ಕೆ ಧಾವಿಸಿದ ಆಂಬ್ಯುಲೆನ್ಸ್ ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದೆ. ಘಟನೆಯ ತಿವ್ರತೆಗೆ ಕಾರು ಸಂಪೂರ್ಣ ಜಖಂ ಆಗಿದೆ. ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಕಾರು ಜಖಂಗೊoಡಿದ್ದು, ಕಾರಿನಲ್ಲಿದ್ದವರ ಕೈಕಾಲು ಮುರಿತವಾಗಿ ತೀವ್ರವಾದ ಗಾಯವಾಗಿದೆ ಎನ್ನಲಾಗಿದೆ.


ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button