Trending

ಆಸ್ಪತ್ರೆಯಿಂದ ಹಿಂದಿರುಗಿದ್ದ ತಂದೆಯನ್ನು ಮನೆಗೆ ಬಿಡಲು ತೆರಳಿದ್ದ ವೇಳೆ ಅಂಗಡಿ ಕಳ್ಳತನ

ಮುಂಬಾಗಿಲು ತೆರದಿಟ್ಟದ್ದನ್ನು ಗಮನಿಸಿದ್ದರೆ ಕಳ್ಳರು?
ಡ್ರಾವರ್‌ನಲ್ಲಿದ್ದ ಹಣ್ಣ ಕಳ್ಳತನ

[sliders_pack id=”1487″]

ಅಂಕೋಲಾ: ತಾಲೂಕಿನ ಪಟ್ಟಣದ ದಿನಕರ ದೇಸಾಯಿ ರಸ್ತೆಯಂಚಿಗಿರುವ ಮಿಶನರಿ ಆಸ್ಪತ್ರೆ ಎದುರಿನ ಅಂಗಡಿಯೊoದರಲ್ಲಿ ಹಾಡು ಹಗಲೇ ಕಳ್ಳತನ ನಡೆದಿದ್ದು, ಅಂಗಡಿಯ ಗಲ್ಲಿ ಪೆಟ್ಟಿಗೆಯಿಂದ ಕಳ್ಳರು 8 ಸಾವಿರಕ್ಕೂ ಹೆಚ್ಚಿನ ನಗದು, ಕಳ್ಳತನ ಮಾಡಿದ್ದು, ಪ್ರಕರಣಕ್ಕೆ ಸಂಬoಧಿಸಿದoತೆ ಪೊಲೀಸ ದೂರು ದಾಖ ಲಾಗಿದ್ದು, ತನಿಖೆ ಮುಂದುವರಿದಿದೆ.


ಪರ್ನಿಚರ್ ಅಂಗಡಿಯ ಮಾಲಕ ಆಸ್ಪತ್ರೆಯಿಂದ ಹಿಂದಿರುಗಿದ್ದ ತನ್ನ ತಂದೆಯನ್ನು ಮನೆಗೆ ಬಿಟ್ಟು ಬರಲು ತೆರಳಿದ್ದ ವೇಳೆ ಅಂಗಡಿಯ ಮುಂಬಾಗಿಲು ತೆರದಿಟ್ಟದ್ದನ್ನು ಗಮನಿಸಿಯೇ ಚಾಲಾಕಿ ಕಳ್ಳರು ಈ ಕೃತ್ಯ ನಡೆಸಿರುವ ಸಂಶಯ ವ್ಯಕ್ತವಾಗಿದ್ದು, ಪೊಲೀಸರು ಪಕ್ಕದ ಹೊಟೇಲ್ನ ಸಿಸಿ ಕ್ಯಾಮರ ಪುಟೇಜ್ ತೆಗೆದು ತನಿಖೆ ಮುಂದುವರಿಸಿದ್ದಾರೆ. ಚಾವಿ ಇಲ್ಲದೇ ಟೇಬಲ್ ಮಾದರಿಯ ಗಲ್ಲಿ ಪೆಟ್ಟಿಗೆಯನ್ನು ತೆರೆದು ನಗದು ಕಳ್ಳತನ ನಡೆಸಿದ್ದಾರೆ.


ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹವಲ್ದಾರ ಮೋಹನದಾಸ ಶೇಣ್ವಿ, ಮುಂಜುನಾಥ ಲಕ್ಮಾಪುರ, ಆಶೀಪ್ ಕುಂಕೂರು, ಶ್ರೀಕಾಂತ ಕರ್ತವ್ಯ ನಿರ್ವಹಿಸಿದರು.


ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button