Uttara Kannada
Trending

ಸೇತುವೆ ಮೇಲಿನಿಂದ‌‌ ಜಿಗಿದು ಮಹಿಳೆ ಆತ್ಮಹತ್ಯೆ

ಹೊನ್ನಾವರ: ಕೌಟುಂಬಿಕ ಸಮಸ್ಯೆಯ ಹಿನ್ನಲೆಯಲ್ಲಿ ಮಾನಸಿಕವಾಗಿ ನೊಂದ ಮಹಿಳೆಯೊಬ್ಬಳು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹಡಿನಬಾಳ ಸಮೀಪ ನಡೆದಿದೆ.ಹಡಿನಬಾಳದ ಮಂಜುಳಾ ಮಂಜುನಾಥ ನಾಯ್ಕ ಇವರು ಕಳೆದ ಹಲವು ದಿನಗಳಿಂದ ಅನಾರೊಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಜೊತೆಗೆ ಕುಟುಂಬದ ಸದಸ್ಯರೊರ್ವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದುದನ್ನು ಮನಸ್ಸಿಗೆ ಹಚ್ಚಿಕೊಂಡು ಇಂದು ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿಯರ ಹಡಿನಬಾಳ ಬ್ರೀಜ್ ಮೇಲಿಂದ ಗುಂಡಬಾಳ ಹೊಳೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಭಂದ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹಾಗೂ ಸಾರ್ವಜನಿಕರು ಶವವನ್ನು ಮೇಲೆತ್ತಿ ಮುಂದಿನ‌ ಪ್ರಕ್ರಿಯೆ ಕೈಗೊಂಡಿದ್ದಾರೆ

ವಿಸ್ಮಯ ನ್ಯೂಸ್ ಹೊನ್ನಾವರ

Back to top button