Important
Trending

ಉತ್ತರಕನ್ನಡದಲ್ಲಿ 16 ಕೇಸ್: 41 ಮಂದಿ ಗುಣಮುಖ

ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು ಮೂರು ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಊರಕೇರಿಯಲ್ಲಿ 2 ಹಾಗೂ ಮಾಸೂರಿನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಊರಕೇರಿಯ 19 ವರ್ಷದ ಯುವತಿ, 20 ವರ್ಷದ ಯುವತಿ ಮತ್ತು ಮಾಸೂರಿನ 20 ವರ್ಷದ ಯುವಕನಿಗೆ ಕರೊನಾ ದೃಢಪಟ್ಟಿದೆ. ಇಂದು 3 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,937 ಕ್ಕೆ ಏರಿಕೆಯಾಗಿದೆ.

ಹೊನ್ನಾವರದಲ್ಲಿ ಎರಡು ಪಾಸಿಟಿವ್:

ಹೊನ್ನಾವರ: ತಾಲೂಕಿನಲ್ಲಿ ಇಂದು ಇಬ್ಬರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಹೊನ್ನಾವರ ತಾಲೂಕಿನ- ಹೊದ್ಕೆ ಶಿರೂರನ 20 ವರ್ಷದ ವಿದ್ಯಾರ್ಥಿನಿ, ಅನೀಲಗೋಡನ 48 ವರ್ಷದ ಪುರುಷ ಸೇರಿ ಇಂದು ಇಬ್ಬರಿಗೆ ಪಾಸಿಟಿವ್ ಬಂದಿದೆ.

ಅಂಕೋಲಾದಲ್ಲಿಂದು ಯಾವುದೇ ಕೊವಿಡ್ ಕೇಸ್ ಇಲ್ಲಾ : ಗುಣಮುಖ 3

ಅಂಕೋಲಾ : ತಾಲೂಕಿನಲ್ಲಿ ಗುರುವಾರ ಯಾವುದೇ ಹೊಸ ಕೊವಿಡ್ ಕೇಸ್‍ಗಳು ಪತ್ತೆಯಾಗಿಲ್ಲಾ. ಗುಣಮುಖರಾದ ಮೂವರನ್ನು ಬಿಡುಗಡೆಗೊಳಿಸಿಲಾಗಿದ್ದು, ಹೋಂ ಐಸೋಲೇಶನ್‍ನಲ್ಲಿರುವ 17 ಮಂದಿ ಸಹಿತ ಒಟ್ಟೂ 17 ಪ್ರಕರಣಗಳು ಸಕ್ರಿಯವಾಗಿದೆ. 36 ರ್ಯಾಟ್ ಮತ್ತು 148 ಆರ್‍ಟಿಪಿಸಿಆರ್ ಸೇರಿದಂತೆ ಒಟ್ಟೂ 184 ಸ್ಬ್ಯಾಬ್ ಟೆಸ್ಟ್ ನಡೆಸಲಾಗಿದೆ.

ಶಿರಸಿಯಲ್ಲಿಂದು ಮೂರು ಕೇಸ್

ಶಿರಸಿ: ತಾಲೂಕಿನಲ್ಲಿ ಗುರುವಾರ ಮೂವರಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಒಬ್ಬರು ಗುಣಮುಖರಾಗಿದ್ದಾರೆ. ಇಂದು ಚೌಕಿಮಠದಲ್ಲಿ1 , ಯಲ್ಲಾಪುರ ನಾಕಾದಲ್ಲಿ1, ತಿಗಣಿಯಲ್ಲಿ 1 ಕೇಸ್ ದೃಢವಾಗಿದೆ.

ಜಿಲ್ಲೆಯಲ್ಲಿ 16 ಪಾಸಿಟಿವ್:

ಉತ್ತರಕನ್ನಡದಲ್ಲಿ ಇಂದು 16 ಕರೊನಾ‌ ಕೇಸ್ ದಾಖಲಾಗಿದೆ. ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ ಕಾರವಾರ 04, ಭಟ್ಕಳ 1, ಶಿರಸಿ 3, ಯಲ್ಲಾಪುರ 2, ಹಳಿಯಾಳ 2, ಕೇಸ್‌‌ ದಾಖಲಾಗಿದೆ.16 ಪ್ರಕರಣ ದಾಖಲಾಗಿದೆ.

ಇದೇ ವೇಳೆ‌ ಇಂದು 41 ಮಂದಿ ಗುಣಮುಖರಾಗಿ ಬಿಡುಗೆಯಾಗಿದ್ದಾರೆ. ಕಾರವಾರ 8, ಅಂಕೋಲಾ 3, ಕುಮಟಾ 6, ಹೊನ್ನಾವರ 2 , ಭಟ್ಕಳ 3, ಶಿರಸಿ 2 ಮತ್ತು ಮುಂಡಗೋಡಿನಲ್ಲಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ವಿಸ್ಮಯ ನ್ಯೂಸ್ ಕಾರವಾರ

Back to top button