ಭಟ್ಕಳದಲ್ಲಿ ಬೆಂಕಿ ಅನಾಹುತ: ಅಗ್ನಿಯ ಕೆನ್ನಾಲಿಗೆ ಕಂಡು ಕಂಗಾಲಾದ ಸ್ಥಳೀಯರು

ಭಟ್ಕಳ: ತಾಲೂಕಿನ ಪುರಸಭೆ ವ್ಯಾಪ್ತಿಯ ಸಾಗರ ರಸ್ತೆಯಲ್ಲಿನ ಪುರಸಭಾ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹಿಸಿಟ್ಟಿದ್ದ ಪ್ಲಾಸ್ಟಿಕ್ ಹಾಗೂ ಕೆಲವು ಗುಜರಿ ವಸ್ತುಗಳಿಗೆ ಆಕಸ್ಮಿಕವಾಗಿ ಬೆಂಕಿ ತಗಲಿದ್ದು ಪುರಸಭೆಗೆ ಹಾಗೂ ಜಾಲಿ ಪಟ್ಟಣ ಪಂಚಾಯತಗೆ ನಷ್ಟ ಉಂಟಾಗಿದೆ. ಮುಂಜಾನೆ ಎಂದಿನoತೆ ಪುರಸಭೆ ಸಿಬ್ಬಂದಿಗಳು ಘನತ್ಯಾಜ್ಯಕ್ಕೆ ಘಟಕ್ಕೆ ಕೆಲಸಕ್ಕೆ ತೆರಳಿದ್ದ ವೇಳೆ ಈಗಾಗಲೇ ಮನೆ ಮನೆಯಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ಹಾಗೂ ಗುಜರಿ ವಸ್ತುಗಳನ್ನು ಬೆಳಗಾವಿಯ ದಾಲ್ಮಿಯಾ ಸಿಮೆಂಟ್ ಪ್ಯಾಕ್ಟರಿಗೆ ವಿಲೇವಾರಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು.

ಈ ಸಂಬoಧ ಒಟ್ಟು 14 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಲೇವಾರಿಗೆ ಶೇಡ್ ನಲ್ಲಿ ಇರಿಸಲಾಗಿತ್ತು. ಇಲ್ಲಿ ಗುಜರಿ ವಸ್ತುಗಳು ಸಂಗ್ರಹಿಸಿಡಲಾಗಿದ್ದು, ಅದು ಸಹ ಬೆಂಕಿಗೆ ಆಹುತಿ ಆಗಿ ಸಂಪೂರ್ಣ ಭಸ್ಮಗೊಂಡಿದೆ. 7 ರಿಂದ 8 ಟನ್ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಅಂದಾಜು 4 ಸಾವಿರ ಗುಜರಿ ವಸ್ತುಗಳ ಬೆಂಕಿಗೆ ಆಹುತಿ ಯಾಗಿದೆ.


ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯು ಸಮಯ ಕಳೆಯುತ್ತಲೇ ಆಗಸದೆತ್ತರಕ್ಕೆ ಕೆನ್ನಾಲಿಗೆ ಚಾಚಿದ್ದು,ಇದನ್ನು ಕಂಡು ಅಲ್ಲಿನ ಸ್ಥಳೀಯರು ಆತಂಕ ಕೆಡಾಗಿದ್ದರು. ಈ ವೇಳೆ ಪುರಸಭೆ ಸಿಬ್ಬಂದಿಗಳು ಬೆಂಕಿ ಆರಿಸಲು ಪ್ರಯತ್ನಸಿದರು ಸಾಧ್ಯವಾಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಆಗಮಿಸಿ, ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.


ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version