ಶಿರಸಿ: ನಗರದ ಯಲ್ಲಾಪುರ ರಸ್ತೆಯಲ್ಲಿರುವ ಪ್ರಸಿದ್ಧ ಸಾಮ್ರಾಟ ವಸತಿ ಗ್ರಹದ ಕೊನೆಯ ಅಂತಸ್ತಿನ ಮಹಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಸ್ವಲ್ಪ ಮಟ್ಟಿನ ಹಾನಿಯಾಗಿದೆ. ಏಕಾಏಕಿ ಬೆಂಕಿ ಬಿದ್ದಿದ್ದರಿಂದ ಸಾಮ್ರಾಟ ವಸತಿ ಗೃಹದ ಮೊದಲ, ದ್ವಿತೀಯ ಹಾಗು ಕೊನೆಯ ಮಹಡಿಯ ಕೋಣೆಯಲ್ಲಿ ತಂಗಿದ್ದ ಪ್ರವಾಸಿಗರು ಓಡೋಡಿ ಹೊರಗೆ ಬಂದರು. ಜನರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರಿಂದ ಸಾಮ್ರಾಟ ಮುಂಭಾಗದ ಮುಖ್ಯರಸ್ತೆಯಲ್ಲಿ ವಾಹನ ಸಂಚಾರಕ್ಕೆ ಕೆಲಕಾಲ ಅಡಚಣೆ ಉಂಟಾಗಿತ್ತು ಎನ್ನಲಾಗಿದೆ. ಸತತವಾಗಿ ಪ್ರಯತ್ನಿಸಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.
ಬೆಂಕಿಯ ಕೆನ್ನಾಲಿಗೆಗೆ ಕೊನೆಯ ಮಹಡಿಯ ಕೋಣೆಯಲ್ಲಿದ್ದ ಇಲೆಕ್ಟ್ರಿಕಲ್ ಉಪಕರಣ ಸೇರಿದಂತೆ ಹಳೆಯ ಬಿಲ್ ಬುಕ್ ಗಳು ಬೆಂಕಿಗೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ cpi ಪ್ರದೀಪ ಬಿ ಯು ಮತ್ತು ಪಿಎಸ್ಆಯ್ ನಂಜಾ ನಾಯ್ಕ ತೆರಳಿ ಪರಿಶೀಲನೆ ನಡೆಸಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಈ ಬೆಂಕಿ ಅನಾಹುತ ಸಂಭವಿಸಿದೆ ಎನ್ನಲಾಗಿದೆ.
ವಿಸ್ಮಯ ನ್ಯೂಸ್, ಶಿರಸಿ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಅಂಕೋಲಾ ಪುರಸಭೆಯ ವಾರ್ಡ್ ನಂ 14ಕ್ಕೆ ನವೆಂಬರ್ 23 ರಂದು ಉಪಚುನಾವಣೆ
- ರಸ್ತೆಗೆ ಅಡ್ಡಲಾಗಿ ಬಂದ ದನ ತಪ್ಪಿಸಲು ಹೋಗಿ ಅಪಘಾತ: ಬೈಕ್ ಸವಾರ ಸಾವು
- ಗ್ರಾಹಕರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸುತ್ತಿದ್ದ ನಯವಂಚಕ : ಕೊನೆಗೂ ಖಾಕಿ ಬಲೆಗೆ ಬಿದ್ದ ಚಾಲಾಕಿ ?
- ಮುರ್ಡೇಶ್ವರದಲ್ಲಿ ಮೂರುದಿನಗಳ ವಿಶ್ವ ಮೀನುಗಾರಿಕೆ ದಿನಾಚರಣೆಗೆ ಸಿದ್ಧತೆ
- ಕುಮಟಾ ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ಅದ್ಧೂರಿ ಯಕ್ಷಗಾನ ಶುಭಲಕ್ಷಣ: ಹಳೆಬೇರು, ಹೊಸ ಚಿಗುರಿನ ಸಮ್ಮಿಲನ, ಅನುಭವಿ ಮೇಳದೊಂದಿಗೆ ಅಪೂರ್ವ ಕಲಾವಿದರ ಮಿಲನ