ಮನೆ ನಂಬರ್ ಕೊಡಲು ಲಂಚಕೇಳುತ್ತಿದ್ದ ಅಧಿಕಾರಿ ಎಸಿಬಿ ಬಲೆಗೆ

15 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ವಶಕ್ಕೆ
ಮನೆಗೆ ನಂಬರ್ ಕೊಡದೆ ಏಳು ವರ್ಷದಿಂದ ಸತಾಯಿಸುತ್ತಿದ್ದ

ಶಿರಸಿ: ಏಳು ವರ್ಷದ ಹಿಂದೆ ಕಟ್ಟಿದ ಮನೆಗೆ ನಂಬರ್ ನೀಡದೆ ಲಂಚ ನೀಡಬೇಕೆಂದು ಕಾಡುತ್ತಿದ್ದ ಪಂಚಾಯತ್ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾನೆ. ಹೌದು, ನಗರದ ಜಾನ್ಮನೆ ಪಂಚಾಯತ್ ಅಧಿಕಾರಿ(ಪಿಡಿಓ)ಕೃಷ್ಣಪ್ಪ ಎಲ್ವಗಿ ಎನ್ನುವವರು ಏಳು ವರ್ಷದ ಹಿಂದೆ ಕಟ್ಟಿದ ಮನೆಗೆ ನಂಬರ್ ನೀಡದೆ ಲಂಚಕೇಳುತ್ತಿದ್ದ ಎನ್ನಲಾಗಿದೆ. ಈ ಸಂಬoಧ ವ್ಯಕ್ತಿಯೊಬ್ಬರು ಎಸಿಬಿಗೆ ದೂರು ನೀಡಿದ್ದರು. ಎಸಿಬಿಯವರು ದಾಳಿ ನಡೆಸಿ, ಲಂಚ ಸ್ವೀಕರಿಸುತ್ತಿದ್ದ ಪಿಡಿಓ ಕೃಷ್ಣಪ್ಪ ಅವರನ್ನು ಬಂಧಿಸಿದ್ದಾರೆ.

ಸುಧೀoದ್ರ ಹೆಗಡೆಯಿಂದ ಲಂಚ ಸ್ವೀಕಾರ ಮಾಡುತ್ತಿರುವಾಗ ಜಾನ್ಮನೆ ಪಿಡಿಓ ಕೃಷ್ಣಪ್ಪ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಸಂಪಖoಡ ಗ್ರಾಮದ ಸುಧೀಂದ್ರ ಹೆಗಡೆ 2004 ರಲ್ಲಿ ನಿರ್ಮಿಸಿದ್ದ ಮನೆಗೆ ನೋಂದಣಿ ಸಂಖ್ಯೆ ನೀಡಲು 15 ಸಾವಿರ ಲಂಚ ನೀಡುವಂತೆ ಕೇಳಿದ್ದ. ಹಣ ಕೊಡದಿದ್ದಕ್ಕೆ ಏಳು ವರ್ಷದಿಂದ ಸತಾಯಿಸಿದ್ದರು.

ಸುಧೀಂದ್ರ ಹೆಗಡೆ ದೂರಿನ ಅನ್ವಯ ಲಂಚ ಸ್ವೀಕರಿಸುವ ವೇಳೆ ಎಸಿಬಿ ಡಿ.ವೈ.ಎಸ್.ಪಿ ಶ್ರೀಕಾಂತ್ ನೇತ್ರತ್ವದಲ್ಲಿ ದಾಳಿ ನಡೆಸಿ ಹಣದ ಸಮೇತ ವಶಕ್ಕೆ ಪಡೆದಿದ್ದಾರೆ. ಕಾರವಾರ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

[sliders_pack id=”1487″]

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Exit mobile version