ಉತ್ತರಕನ್ನಡದಲ್ಲಿ ಇಂದು 20 ಕರೊನಾ ಪಾಸಿಟಿವ್

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 20 ಕರೊನಾ‌ ಕೇಸ್ ದಾಖಲಾಗಿದೆ. ಇದೇ ವೇಳೆ ಇಂದು ವಿವಿಧ ಆಸ್ಪತ್ರೆಯಿಂದ‌ 21 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 4 ಕರೊನಾ ಸೋಂಕಿತ ಪ್ರಕರಣ ಪತ್ತೆಯಾಗಿದೆ. ತಾಲೂಕಿನ ವಿವೇಕನಗರದಲ್ಲಿ 2 ಹಾಗೂ ನೆಲ್ಲಿಕೇರಿ, ಉಪ್ಪಾರಕೇರಿ ಭಾಗದಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ. ವಿವೇಕನಗರದ 58 ವರ್ಷದ ಪುರುಷ, 52 ವರ್ಷದ ಮಹಿಳೆ, ನೆಲ್ಲಿಕೇರಿಯ 47 ವರ್ಷದ ಮಹಿಳೆ ಮತ್ತು ಉಪ್ಪಾರಕೇರಿಯ 45 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. ಇಂದು 4 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1985 ಕ್ಕೆ ಏರಿಕೆಯಾಗಿದೆ. ಇದೇ ವೇಳೆ, ಇಂದು ಹೊನ್ನಾವರ ತಾಲೂಕಿನಲ್ಲಿ ಯಾವುದೇ ಕೇಸ್ ಕಂಡುಬಂದಿಲ್ಲ.

ಯಲ್ಲಾಪುರದಲ್ಲಿಂದು 2 ಕರೊನಾ ಕೇಸ್

ಯಲ್ಲಾಪುರ: ಪಟ್ಟಣದಲ್ಲಿ ಶನಿವಾರ ಇಬ್ಬರಿಗೆ ಕೊರೊನಾ ಸೋಂಕು ಧೃಢಪಟ್ಟಿದ್ದು, ಮೂವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.ಇಂದು ಇಲ್ಲಿನ ಮಹಿಳಾಮಂಡಲ ಸಮೀಪದ ನಿವಾಸಿಗಳಾದ ಓರ್ವ ಯುವಕ ಹಾಗೂ ಓರ್ವ ವೃದ್ಧೆಗೆ ಸೋಂಕು ತಗುಲಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 13 ಕ್ಕೆ ಇಳಿದಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಅಂಕೋಲಾದಲ್ಲಿಂದು 1 ಕೋವಿಡ್ ಕೇಸ್ : ಹೋಂ ಐಸೋಲೇಶನ್ 4

ಅಂಕೋಲಾ : ತಾಲೂಕಿನಲ್ಲಿ ಶನಿವಾರ 1 ಹೊಸ ಕೋವಿಡ್ ಕೇಸ್ ದೃಢಪಟ್ಟಿದೆ. ಮೊರಳ್ಳಿ ವ್ಯಾಪ್ತಿಯ 20ರ ಯುವತಿಯಲ್ಲಿ ಸೋಂಕು ಲಕ್ಷಣ ಪತ್ತೆಯಾಗಿದೆ. ಹೋಂ ಐಸೋಲೇಶನನಲ್ಲಿರುವ 4 ಮಂದಿ ಸಹಿತ 5 ಪ್ರಕರಣಗಳು ಸಕ್ರಿಯವಾಗಿದೆ. 29ರ್ಯಾಟ್ ಮತ್ತು 47 ಆರ್‍ಟಿಪಿಸಿಆರ್ ಸೇರಿ ಒಟ್ಟೂ 76 ಸ್ವ್ಯಾಬ್ ಟೆಸ್ಟ್ ನಡೆಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version