Follow Us On

WhatsApp Group
Info
Trending

ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಹಡಿನಬಾಳದ ವಾರ್ಷಿಕ ಮಹಾಸಭೆ

ಹೊನ್ನಾವರ: ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಹಡಿನಬಾಳ, ತಾ.ಹೊನ್ನಾವರ ಇದರ 24ನೇವರ್ಷದವಾರ್ಷಿಕ_ಮಹಾಸಭೆಯು covid-19 ಕಾರಣದಿಂದ ಸರಕಾರದ ಮಾರ್ಗದರ್ಶನದಂತೆ ಡಿ. 24 ರಂದು ಜರುಗಿತು. ಬ್ಯಾಂಕಿನ ಅಧ್ಯಕ್ಷ ಹರಿಯಪ್ಪ ನಾಯ್ಕರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಬ್ಯಾಕಿಂಗ್ ಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟಿರುವ ವಿ.ಎಸ್.ಎಸ್. ಹಡಿನಬಾಳ 2019-20 ನೇ ಸಾಲಿನಲ್ಲಿ ರೂ.11,92.330 ಲಾಭ ಗಳಿಸಿದ್ದು, ಸಂಘದ ಉತ್ತಮ ಕೆಲಸ & ವ್ಯವಹಾರವನ್ನು ಪರಿಗಣಿಸಿದ ಪ್ರತಿಷ್ಠಿತ ಕೆ.ಡಿ.ಸಿ.ಸಿ ಬ್ಯಾಂಕ್ ಶಿರಸಿ ಇವರು ತಾಲೂಕಾ ಮಟ್ಟದ ಉತ್ತಮಪ್ರಾಥಮಿಕ ಕೃಷಿಪತ್ತಿನಸಹಾಕಾರಿ_ಸಂಘದ ಪ್ರಶಸ್ತಿಯು ತಮಗೆ ಸಂದಿದ್ದು ನಿರ್ದೇಶಕ ಮಂಡಳಿಯ ಸಹಯೋಗ, ಸಿಬ್ಬಂದಿಗಳ ಪರಿಶ್ರಮ ಹಾಗೂ ಶೇರುದಾರರ ಸಹಕಾರದಿಂದ ಈ ಪ್ರಶಸ್ತಿ ಲಭಿಸಿದ್ದು ಸಂತಸದ ವಿಷಯವೆಂದು ಸಭೆಯಲ್ಲಿ ಆಧ್ಯಕ್ಷರು ತಿಳಿಸಿದರು.

ಪ್ರತಿ ವರ್ಷದಂತೆ 11 ಹಿರಿಯ ರೈತರಿಗೆ, ಕೊರೊನಾ ವಾರಿಯರ್ಸ್ ಎನಿಸಿಕೊಂಡ ಹಡಿನಬಾಳ ವ್ಯಾಪ್ತಿಯ ಆಶಾ ಕಾರ್ಯಕರ್ತರಿಗೆ & ಡಾಕ್ಟರ್ ಗೆ ಸಂಮಾನ ಹಾಗೂ ಹಲವು ಕಾರ್ಯಕ್ರಮದ ಮುಖೇನ ಸಭೆಯು ಮುಕ್ತಾಯಗೊಂಡಿತು.

Back to top button