Follow Us On

WhatsApp Group
Important
Trending

ಶಾಂತಿಯುತ‌ ಮತದಾನ: ಶೇಕಡಾವಾರು ಪ್ರಮಾಣ ಎಷ್ಟು?

ಕಾರವಾರ : ಉತ್ತರಕನ್ನಡದ ಏಳು ತಾಲೂಕುಗಳಲ್ಲಿ ಭಾನುವಾರ ನಡೆದ ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಒಟ್ಟು 3,19,742 ಮಂದಿ ಮತದಾನದ ಹಕ್ಕು ಚಲಾಯಿಸಿದ್ದು, ಶೇ. 81.41 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವಡಾ. ಹರೀಶಕುಮಾರ ಕೆ. ಆವರು ಅಧಿಕೃತವಾಗಿ ತಿಳಿಸಿದ್ದಾರೆ.
ಹಳಿಯಾಳ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ ಶೇ. 84.64 ರಷ್ಟು ಮತದಾನವಾಗಿದ್ದು, ಮುಂಡಗೋಡದಲ್ಲಿ ಶೇ. 83.99ರಷ್ಟು ಮತದಾನ ದಾಖಲಾಗಿದೆ.
ಇನ್ನುಳಿದಂತೆ ಸಿದ್ದಾಪುರ ಶೇ. 82.20ರಷ್ಟು, ಶಿರಸಿ ಶೇ. 81.00ರಷ್ಟು, ಯಲ್ಲಾಪುರ ಶೇ. 80.87ರಷ್ಟು, ಜೋಯಿಡಾ ಶೇ. 76.32ರಷ್ಟು ಹಾಗೂ ದಾಂಡೇಲಿ ಶೇ. 75.23ರಷ್ಟು ಮತದಾನ ಆಗಿದೆ.

ಜಿಲ್ಲೆಯ ಈ ಏಳು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳಗ್ಗೆ 7 ರಿಂದಲೇ ಶಾಂತಿಯುತ ಹಾಗೂ ಉತ್ಸಾಹದಿಂದ ಮತದಾನ ನಡೆದಿದ್ದು, ಹಂತ ಹಂತವಾಗಿ ಮತದಾರರು ಮತಗಟ್ಟೆಗೆ ಆಗಮಿಸಿ ಮತದಾನಕ್ಕೆ ಹೆಚ್ಚಿನ ಉತ್ಸಾಹದಿಂದ ಮತದಾನ ಮಾಡಿದ್ದರು.

ಕೋವಿಡ್-19ರ ಮುನ್ನೆಚ್ಚರಿಕೆ ಕ್ರಮಗಳಡಿ ಉತ್ಸಾಹ ತೋರಿದ ಮತದಾರ

ಜಿಲ್ಲೆಯ ಏಳು ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ನಡೆದ ಚುನಾವಣೆಯನ್ನು, ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲಾಡಳಿತವು ಕೋವಿಡ್-19ಗೆ ಸಂಬಂಧಿಸಿದ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಶಾಂತಿಯುತವಾಗಿ ಮತದಾನ ಪ್ರಕ್ರಿಯೆಯನ್ನು ನಡೆಸಿತು.

ಆಸಕ್ತರಿಗೆ ಮತ ಚಲಾಯಿಸಲು ಅನಕೂಲವಾಗುವಂತೆ ವ್ಹೀಲ್‌ಚೇರ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ಯುವಕರು, ಯುವತಿಯರು, ಮಹಿಳೆಯರು, ವೃದ್ಧರು, ವಿಕಲಚೇತನರು ಮತ್ತು ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿ ಸೇರಿದಂತೆ ಮತದಾನ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂಧಿ ಮಾಸ್ಕ್ ಧರಿಸಿ, ಕೈಗೆ ಸ್ಯಾನಿಟೈಸರ್ ಮಾಡಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾದರು. ಪೋಲಿಸರು ಮತದಾನ ಕೇಂದ್ರದ ಸುತ್ತ-ಮುತ್ತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದರು.

ವಿಸ್ಮಯ ನ್ಯೂಸ್,‌ಕಾರವಾರ

Back to top button