ಮತ್ತುಬರುವ ಔಷಧಿ ಸಿಂಪಡಿಸಿ ಮಗಳ ಅಪರಣ ಪ್ರಕರಣ: ಮಹಿಳೆಯನ್ನು ಸುರಕ್ಷಿತವಾಗಿ ಕರೆತಂದ ಪೊಲೀಸರು

ಪತಿಯ ಮುಂದೆಯೇ ಪತ್ನಿಯ ಅಪಹರಣವಾಗಿತ್ತು
ಮಗಳ ಮನೆಗೆ ನುಗ್ಗಿ ತಾಯಿ ಸಿನಿಮೀಯ ಶೈಲಿಯಲ್ಲಿ ಸ್ವಂತ ಪುತ್ರಿಯನ್ನೇ ಅಪಹರಿಸಿದ್ದಳು

ಶಿರಸಿ: ಕಳೆದ ಮೂರು ದಿನಗಳ ಹಿಂದೆ ತಾಲೂಕಿನಲ್ಲಿ ನಡೆದ ಅಪಹರಣ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ತನಿಖೆ ಆರಂಭಿಸಿದ ಪೊಲೀಸರು ಎರಡನೇ ದಿನದಲ್ಲಿ ಮಹಿಳೆಯನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ. ಮನೆಯೊಂದಕ್ಕೆ ನುಗ್ಗಿದ್ದ ದುಷ್ಕರ್ಮಿಗಳು ಮಹಿಳೆಗೆ ಮತ್ತು ಬರಿಸುವ ಔಷಧಿ ಸಿಂಪಡಿಸಿ, ಕಿಡ್ಯಾಪ್ ಮಾಡಿದ್ದರು. ಆದರೆ, ಈ ಅಪಹರಣವನ್ನು ಮಾಡಿದ್ದು, ಬೇರಾರು ಅಲ್ಲ, ಮಗಳ ತಾಯಿಯೇ ಎಂದು ತಿಳಿದುಬಂದಿತ್ತು. ಹೌದು, ತನಗೆ ಇಷ್ಟವಿಲ್ಲದೇ ಪ್ರೀತಿಸಿ ಮದುವೆಯಾಗಿದ್ದಕ್ಕೆ ತಾಯಿಯೇ ಮಗಳನ್ನು ಅಪಹರಿಸಿ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿತ್ತು.

ರುತಿಕಾ ಎಂಬ ಯುವತಿ ಶಿರಸಿಯ ಬಸವೇಶ್ವರ ನಗರದ ಮಣಿಕಂಠ ಎಂಬುವ ಯುವಕನ್ನು ಪ್ರೀತಿಸಿ ಕೆಲವು ದಿನದ ಹಿಂದೆ ವಿವಾಹವಾಗಿದ್ದಳು. ಆದರೆ, ಈ ಮದುವೆ ಯುವತಿಯ ತಾಯಿಗೆ ಇಷ್ಟವಿರಲಿಲ್ಲ. ಶಿರಸಿ ನಗರದಲ್ಲಿ ಬ್ಯೂಟಿಪಾರ್ಲರ್ ನಡೆಸುತಿದ್ದ ಆಕೆಯ ತಾಯಿ ರೂಪ ಶಿರ್ಸಿಕರ್ ಇದಕ್ಕೆ ಏನಾದರು ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದರು. ಮಗಳು ತನ್ನ ಮಾತು ಕೇಳದೇ ಬೇರೆ ಯುವಕನನ್ನು ವಿವಾಹವಾಗಿದ್ದಕ್ಕೆ ಕುಪಿತಗೊಂಡ ತಾಯಿ, ಹಾಗು ಮೂರು ಜನ ಯುವಕರೊಂದಿಗೆ ಬಸವೇಶ್ವರ ನಗರದಲ್ಲಿದ್ದ ರುತಿಕಾ ಮನೆಗೆ ಏಕಾಏಕಿ ದಾವಿಸಿದ್ದಳು. ಈ ವೇಳೆ ಮನೆಯಲ್ಲಿದ್ದ ಎಲ್ಲರಿಗೂ ಪೆಪ್ಪರ್ ಸ್ಪ್ರೇ ಯನ್ನು ಮುಖಕ್ಕೆ ಎರಚಿ ಮಗಳನ್ನು ಆಕೆಯ ಗಂಡನ ಎದುರೇ ತಾನು ತಂದಿದ್ದ ಕಾರಿನಲ್ಲಿ ಅಪಹರಿಸಿ ಕರೆದೊಯ್ದಿದ್ದಳು.

ಈ ಸಂಬoಧ ಪತ್ನಿಯ ಪತಿ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ದೂರು ನೀಡಿದ್ದ. ಪೊಲೀಸರು ಈಗ ಅಪಹರಣವಾಗಿದ್ದ ಮಹಿಳೆಯನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version