ಜನತಾ ಕ್ರಿಕೆಟ್ ಕ್ಲಬ್‍ನ 41ನೇ ವರ್ಷದ ಪಂದ್ಯಾವಳಿ : ಮದರ್ ಮೇರಿ ಪೂಜಗೇರಿ ತಂಡ ಚಾಂಪಿಯನ್

ಅಂಕೋಲಾ : ಜಿಲ್ಲೆಯ ಪ್ರತಿಷ್ಠಿತ ಕ್ರೀಡಾ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಬಾಸಗೋಡದ ಜನತಾ ಕ್ರಿಕೆಟ್ ಕ್ಲಬ್ ಇವರ ಆಶ್ರಯದಲ್ಲಿ ದಿ.ಶೀಳ್ಯ ಅನಂತ ನಾಯಕ ಸ್ಮಾರಕ 41ನೇ ವರ್ಷದ ಮುಕ್ತ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಎರಡು ದಿನಗಳ ಕಾಲ ನಡೆಯಿತು.
ಕೋವಿಡ್ ಮಾರ್ಗಸೂಚಿ ಅನ್ವಯ ಸುರಕ್ಷಾ ನಿಯಮಾವಳಿ ಪಾಲಿಸಿ, ಮನರಂಜನೆ ಮತ್ತಿತರ ಕಾರ್ಯ ಕ್ರಮಗಳನ್ನು ಮೊಟಕುಗೊಳಿಸಿ ಅತ್ಯಂತ ಸರಳವಾಗಿ ಆಚರಿಸಲಾಯಿತು.

ಕೇವಲ 8 ತಂಡಗಳಿಗೆ ಆಹ್ವಾನಿ ಸಲಾಗಿದ್ದು, ಎಲ್ಲ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು. ಮದರ್ ಮೇರಿ ಪೂಜಗೇರಿ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಪ್ರಶಸ್ತಿ ಮತ್ತು ನಗದು ಬಹುಮಾನ ವನ್ನು ತನ್ನದಾಗಿಸಿಕೊಂಡಿತು. ರಾಯಲ್ ನಾಡವರು ಬೆಂಗಳೂರು ತಂಡದವರು ರನ್ನರಪ್ ಪ್ರಶಸ್ತಿಗೆ ತೃಪ್ತಿ ಪಡುವಂತಾಯಿತು.

ಕ್ಲಬ್‍ನ ಸಂಸ್ಥಾಪಕ ಸದಸ್ಯರಾದ ಜಗದೀಶ ಅನಂತ ನಾಯಕ ಶೀಳ್ಯ ಮತ್ತು ಪ್ರದೀಪ ಎಂ. ನಾಯಕ ಕೊಗ್ರೆ ಬಹುಮಾನ ವಿತರಿಸಿ ಮಾತನಾಡಿ ಸುಧೀರ್ಘ 40 ವರ್ಷಗಳಿಂದ ಕ್ರಿಕೆಟ್ ಮತ್ತಿತರ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡ ಬಗೆಯನ್ನು ವಿವಿರಿಸಿ ಅನುಭವ ಹಂಚಿಕೊಂಡರು. ಕ್ಲಬ್‍ನ ಅಧ್ಯಕ್ಷ ಗೋಕುಲ ವಿನೋದ ನಾಯಕ ಸ್ವಾಗತಿಸಿದರು. ಕಾರ್ಯದರ್ಶಿ ವಿಘ್ನೇಶ ನಾಯಕ ಕ್ಲಬ್‍ನ ಕಾರ್ಯ ಚಟುವಟಿಕೆ ವಿವಿರಿಸಿ, ಸಹಕರಿಸಿದ ಸರ್ವರನ್ನು ಸ್ಮರಿಸಿದರು. ರಜತ್ ಎಚ್.ನಾಯಕ ನಿರ್ವಹಿಸಿದರು.

ಮದರ್ ಮೇರಿ ತಂಡದ ಅನುಪ ಕಾರವಾರ ಉತ್ತಮ ಬೌಲ್‍ರ, ಯೋಗೇಶ ಕಾರವಾರ ಉತ್ತಮ ಬ್ಯಾಟ್ಸಮನ್ ಮತ್ತು ಸರಣಿ ಪುರುಷ ಪ್ರಶಸ್ತಿ ಪಡೆದುಕೊಂಡರು. ಪ್ರಮುಖರಾದ ದೇವಾನಂದ ಬಿ. ಗಾಂವಕರ, ಹೊನ್ನಪ್ಪ ಆರ್. ನಾಯಕ, ಯೋಗೇಶ ವಿ. ನಾಯಕ, ಗುರುಪ್ರಸಾದ ಎನ್.ನಾಯಕ ಹಾಗೂ ಬಾಸಗೋಡ ಊರ ನಾಗರಿಕರು, ಸುತ್ತಮುತ್ತಲಿನ ಹಳ್ಳಿಗಳ ಪ್ರೇಕ್ಷಕರು ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version