ನೀರು ತೆಗೆಯುತ್ತಿರುವಾಗ ಆಯತಪ್ಪಿ ಬಾವಿಗೆ ಬಿದ್ದ ಯುವತಿ: ಅಗ್ನಿಶಾಮಕ ದಳದ ಕಾರ್ಯಾಚರಣೆ

ಕುಮಟಾ: ಬಾವಿಯಿಂದ ನೀರು ತೆಗೆಯುತ್ತಿರುವಾಗ ಆಕಸ್ಮಿಕವಾಗಿ ಯುವತಿಯೊಬ್ಬಳು ಬಾವಿಗೆ ಬಿದ್ದ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಚಿತ್ರಗಿಯಲ್ಲಿ ನಡೆದಿದೆ. ತಾಲೂಕಿನ ಚಿತ್ರಗಿ ನಿವಾಸಿಯಾದ 23 ವರ್ಷದ ಯುವತಿ ಬಾವಿಯಿಂದ ನೀರು ತೆಗೆಯುತ್ತಿರುವಾಗ ಆಯತಪ್ಪಿ ಬಾವಿಗೆ ಬಿದ್ದಿದ್ದಾಳೆ. ಕೂಡಲೇ ಕುಟುಂಬಸ್ಥರು, ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕಾಗಿಮಿಸಿ, ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ, ಯುವತಿಯನ್ನು ಬಾವಿಯಿಂದ ಸುರಕ್ಷಿತವಾಗಿ ಹೊರಗಡೆ ತೆಗೆದಿದ್ದಾರೆ.

ವಿಷಯ ತಿಳಿದು ಕೂಡಲೇ ಸ್ಥಳಕ್ಕಾಗಿಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು, ತುರ್ತು ಕಾರ್ಯಾಚರಣೆ ನಡೆಸಿ, ಯುವತಿಯ ಪ್ರಾಣ ರಕ್ಷಿಸಿದ್ದಾರೆ. ಬಾವಿ ಬಿದ್ದು ನೀರಿನಲ್ಲಿ ಮುಳುಗಿದ್ದರಿಂದ ಯುವತಿ ಸ್ವಲ್ಪ ಅಸ್ವಸ್ಥಳಾಗಿದ್ದಳು. ಹೀಗಾಗಿ ಕೂಡಲೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಸಮಯಕ್ಕೆ ಸರಿಯಾಗಿ ಆಗಮಿಸಿ ಯುವತಿಯನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಗೆ ಯುವತಿಯ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಟಿ ಎನ್ ಗೊಂಡ, ದಿನೇಶ್ ವೆಂಗುರ್ಲೆಕರ್, ಮಾಬಲೇಶ್ವರ ಹರಿಕಾಂತ, ಗುರುನಾಥ ನಾಯ್ಕ ಮುಂತಾದವರು ಇದ್ದರು.

ವಿಸ್ಮಯ ನ್ಯೂಸ್, ಕುಮಟಾ

ಮದುವೆ ಆಗುತ್ತಿಲ್ಲವೇ? ಉದ್ಯೋಗ ಸಮಸ್ಯೆಯೇ? ಇಲ್ಲಿದೆ ಪರಿಹಾರ

ದೈವಜ್ಞ ವಿದ್ಯಾಭೂಷಣ ಪ್ರಶಸ್ತಿ ವಿಜೇತರು, ದುರ್ಗಾದೇವಿ ಉಪಾಸಕರಾದ ಪಂಡಿತ ಶ್ರೀ ವಿ.ರಾಘವೇಂದ್ರ ರಾವ್ ಶಾರ್ಮಾ ಅವರು ಕೆಲವೇ ದಿನಗಳಲ್ಲಿ ಈ ಸಮಸ್ಯೆಗಳಿಗೆ ಮುಕ್ತಿ ನೀಡುತ್ತಾರೆ. ಇವರು ಕಾಶಿಯಲ್ಲಿ ಜ್ಞಾನ ತಪಸ್ಸಿನಿಂದ ಯಂತ್ರ-ಮoತ್ರ-ವಾಕ್ಯಸಿದ್ಧಿ-ಸoಪಾದಿಸಿದ್ದು, ನೀವು ದೂರವಾಣಿ ಮೂಲಕ ಸಂಪರ್ಕಿಸಿ, ಪರಿಹಾರ ಕಂಡುಕೊಳ್ಳಬಹುದು. ಕೂಡಲೇ ಸಂಪರ್ಕಿಸಿ: 9440269990

Exit mobile version