Info
Trending

ಗ್ರಾ.ಪಂ ಚುನಾವಣೆ: ಗೆಲುವು ದಾಖಲಿಸಿದ ಅಭ್ಯರ್ಥಿಗಳ ವಿವರ

ಕಾರವಾರ: ಎರಡು ಹಂತದಲ್ಲಿ ಜರುಗಿದ  ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತ ಎಣಿಕೆ ಪ್ರಕ್ರಿಯೆ ಬುಧವಾರ ರಾತ್ರಿ ಪೂರ್ಣಗೊಂಡಿದ್ದು, ಅವಿರೋಧ ಹಾಗೂ ಮತದಾನದ ಮೂಲಕ 2657 ಸದಸ್ಯರು ಆಯ್ಕೆಯಾಗಿದ್ದಾರೆ.

ಜಿಲ್ಲೆಯ 227 ಗ್ರಾ ಪಂ ಗಳ ಒಟ್ಟು 2662 ಸ್ಥಾನಗಳಿಗೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು. ಇದರ ಪೈಕಿ 5 ಸ್ಥಾನಗಳಿಗೆ ನಾಮಪತ್ರ ತಿರಸ್ಕೃತ ಹಾಗೂ ನಾಮಪತ್ರ ಸಲ್ಲಿಸದೇ ಇರುವುದರಿಂದ ಆ ಸ್ಥಾನಗಳು ಖಾಲಿ ಉಳಿದಿರುತ್ತವೆ.  187 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಹೀಗಾಗಿ ಇನ್ನುಳಿದ 2470 ಸ್ಥಾನಗಳಿಗೆ ಮತದಾನ ನಡೆಸಲಾಗಿತ್ತು. ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳು ಸೇರಿದಂತೆ ಚುನಾವಣಾ ಪ್ರಕ್ರಿಯೆಯಲ್ಲಿ ಒಟ್ಟು 2657 ಅಭ್ಯರ್ಥಿಗಳು ಹೊಸದಾಗಿ ಗ್ರಾಮಪಂಚಾಯತ್ ಪ್ರವೇಶಿಸಿದ್ದಾರೆ.

ಚುನಾಯಿತ ಸದಸ್ಯರ ವರ್ಗವಾರು ವಿವರ: ಗ್ರಾಪಂ ಒಟ್ಟು ಸದಸ್ಯರಲ್ಲಿ 1386 ಮಹಿಳಾ ಅಭ್ಯರ್ಥಿಗಳು, 1271 ಸಾಮಾನ್ಯ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಎಲ್ಲಾ ತಾಲೂಕುಗಳ ಒಟ್ಟು ಗ್ರಾಮ ಪಂಚಾಯತ್ ಅಭ್ಯರ್ಥಿಗಳಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗಿಂತ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಅನುಸೂಚಿತ ಜಾತಿ ವರ್ಗದ ಸಾಮಾನ್ಯ ವಿಭಾಗದಲ್ಲಿ 51 ಅಭ್ಯರ್ಥಿಗಳು ಹಾಗೂ 251 ಮಹಿಳಾ ಅಭ್ಯರ್ಥಿಗಳು ಸೇರಿ 302 ಮಂದಿ ಆಯ್ಕೆಯಾಗಿದ್ದಾರೆ.ಅನುಸೂಚಿತ ಪಂಗಡದಲ್ಲಿ 14 ಸಾಮಾನ್ಯ ಅಭ್ಯರ್ಥಿಗಳು, 228 ಮಹಿಳಾ ಅಭ್ಯರ್ಥಿಗಳು ಸೇರಿ 242 ಅಭ್ಯರ್ಥಿಗಳು ಗ್ರಾಮ ಪಂಚಾಯತ್ ಪ್ರವೇಶಿಸಿದ್ದಾರೆ. ಹಿಂದುಳಿದ ಅ ವರ್ಗದ ಸಾಮಾನ್ಯ ವಿಭಾಗದಲ್ಲಿ 215 ಅಭ್ಯರ್ಥಿಗಳು, 357 ಮಹಿಳಾ ಅಭ್ಯರ್ಥಿಗಳು ಸೇರಿ 572 ಅಭ್ಯರ್ಥಿಗಳು ಆಯ್ಕೆಗೊಂಡಿರುತ್ತಾರೆ.  ಹಿಂದುಳಿದ ವರ್ಗ ಬ ವರ್ಗದ ಸಾಮಾನ್ಯ ವಿಭಾಗದಲ್ಲಿ 79 ಅಭ್ಯರ್ಥಿಗಳು, 47 ಮಹಿಳಾ ಅಭ್ಯರ್ಥಿಗಳು ಸೇರಿ 126 ಮಂದಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ವರ್ಗದ ಸಾಮಾನ್ಯ ವಿಭಾಗದಲ್ಲಿ 912 ಅಭ್ಯರ್ಥಿಗಳು ಹಾಗೂ ಇದೇ ವಿಭಾಗದ ಮಹಿಳಾ ಮೀಸಲಾತಿ ಮೂಲಕ 503 ಮಂದಿ ಸೇರಿ 1415 ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ.

ಕುಮಟಾ: ಗೆಲುವು ದಾಖಲಿಸಿದ ಅಭ್ಯರ್ಥಿಗಳ ವಿವರ

ಕುಮಟಾ: ತಾಲೂಕಿನ 22 ಗ್ರಾಮ ಪಂಚಾಯತ್‌ನ 96 ವಾರ್ಡ್ಗಳ 321 ಸದಸ್ಯ ಸ್ಥಾನಗಳಿಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆಯಲ್ಲಿ ಯಾವ ಯಾವ ಪಂಚಾಯತ್‌ನಲ್ಲಿ ಯಾರು ಜಯ ದಾಖಲಿಸಿದ್ದಾರೆ. ಗೆಲುವು ದಾಖಲಿಸಿದ ಅಭ್ಯರ್ಥಿಗೆ ಎಷ್ಟು ಮತ ಬಂದಿದೆ ಎನ್ನುವ ವಿವರ ಈ ಕೆಳಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button