Join Our

WhatsApp Group
Info
Trending

ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು;ಎಸ್.ಟಿ.ಗೌಡ ಅಂತ್ರವಳ್ಳಿ

ಕುಮಟಾ: ತೀವ್ರ ಕುತೂಹಲ ಕೆರಳಿಸಿದ್ದ ದೀವಗಿ ಪಂಚಾಯತದ ಅಂತ್ರವಳ್ಳಿ – ಹೊಂಡದಕ್ಕಲ ಕ್ಷೇತ್ರದ ಚುನಾವಣೆಯಲ್ಲಿ ಶಾಸಕ‌ ದಿನಕರ‌ ಶೆಟ್ಟಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ, ಹಾಲಕ್ಕಿ ಸಮಾಜದ ಪ್ರಮುಖ ಮುಖಂಡ ಶಂಕರ್‌ ತುಳುಸು ಗೌಡ ಅವರು ಭರ್ಜರಿ ಗೆಲುವಿನ ಬಳಿಕ ವಿಸ್ಮಯ ಟಿ.ವಿಗೆ ಪ್ರತಿಕ್ರಿಯಿಸಿದ್ದಾರೆ.

ದೀವಗಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಂತ್ರವಳ್ಳಿ(03) ವಾರ್ಡಿನ‌ಸಾಮಾನ್ಯ ಪುರುಷ ಮೀಸಲು ಕ್ಷೇತ್ರದಿಂದ ಸ್ಪರ್ದಿಸಿದ್ದ ನನಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ, ಗೆಲ್ಲಿಸಿ ತಮ್ಮೆಲ್ಲರ ಸೇವೆಗೆ ಅವಕಾಶ ನೀಡಿದ್ದಕ್ಕಾಗಿ ನನ್ನೆಲ್ಲಾ ಪ್ರೀತಿಯ ಮತದಾರ ಬಾಂಧವರಿಗೂ, ನೆಚ್ಚಿನ ಕಾರ್ಯಕರ್ತರಿಗೂ, ಗುರು ಹಿರಿಯರಿಗು, ಹಿತೈಷಿಗಳಿಗು, ಸ್ನೇಹಿತರಿಗು ಹಾಗೂ ಪ್ರತ್ಯಕ್ಷವಾಗಿಯೂ & ಪರೋಕ್ಷವಾಗಿಯೂ ಸಹಕರಿಸಿದಂತಹ ಪ್ರಾಮಾಣಿಕರೆಲ್ಲರಿಗೂ ತುಂಬು ಹ್ರದಯದಿಂದ ಧನ್ಯವಾದಗಳು. ಅಲ್ಲದೇ ಚುನಾವಣೆಯಲ್ಲಿ ಸ್ಪರ್ದಿಸಿದ್ದ ನನ್ನೆಲ್ಲಾ ಸಹ ಸ್ಪರ್ಧಾಳುಗಳಿಗೂ ಅಭಿನಂದನೆ ಸಲ್ಲಿಸಿ, ನಮ್ಮ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ತಮ್ಮೆಲ್ಲರ ಸಹಕಾರ ಕೋರುತ್ತೇನೆ.

ಯಾವುದೇ ರಾಗ ದ್ವೇಷಗಳಿಲ್ಲದೇ, ಪಕ್ಷಬೇಧ ಮಾಡದೇ, ಜಾತಿ ಬೇಧ ಮಾಡದೇ , ಸರ್ವರನ್ನೂ ಸಮನಾಗಿ ಕಂಡು ನನಗೆ ತಾವುಗಳು ವಹಿಸಿರುವ ಜವಾಬ್ದಾರಿಯ ಮಹತ್ವವನ್ನರಿತು ಕಾರ್ಯನಿರ್ವಹಿಸುತ್ತೇನೆ. –ಎಸ್.ಟಿ.ಗೌಡ ಅಂತ್ರವಳ್ಳಿ,‌ ನೂತನ ಗ್ರಾಮ‌ ಪಂಚಾಯತ್ ಸದಸ್ಯರು.

ವಿಸ್ಮಯ ನ್ಯೂಸ್ ಕುಮಟಾ

Check Also
Close
Back to top button