Join Our

WhatsApp Group
Info
Trending

ವಿದ್ಯಾರ್ಥಿಗಳು ಜುಲೈ 31ರ ವರೆಗೆ ಹಳೆ ಬಸ್ ಪಾಸ್ ನಲ್ಲೇ ಪ್ರಯಾಣಿಸಬಹುದು

ಬೆಂಗಳೂರು: ರಾಜ್ಯದಲ್ಲಿ ಜ.1 ರಿಂದ ಶಾಲಾ- ಕಾಲೇಜು ಆರಂಭವಾಗಿದ್ದು, ವಿದ್ಯಾರ್ಥಿಗಳು ಶಾಲೆಯ ಕಡೆ ಮುಖ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಳೆಯ ಬಸ್ ಪಾಸನ್ನೇ ಜನವರಿ ಅಂತ್ಯದವರೆಗೆ ಬಳಸಿಕೊಂಡು ಪ್ರಯಾಣ ಮಾಡಬಹುದೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅನುಮತಿ ನೀಡಿದೆ.ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ತರಗತಿಗಳು ಆರಂಭವಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಾರಿಗೆ ಬಸ್ ಗಳನ್ನೇ ಅವಲಂಬಿಸಿ ಮನೆಯಿಂದ ಓಡಾಡಬೇಕು. ಆದ್ದರಿಂದ ವಿದ್ಯಾರ್ಥಿಗಳಿಗೆ 2019-20 ನೇ ಸಾಲಿನಲ್ಲಿ ವಿತರಿಸಿದ್ದ ಬಸ್ ಪಾಸನ್ನೇ ಬಳಸಿಕೊಂಡು ಓಡಾಡಬಹುದು.

ಮುಂದಿನ ಆದೇಶದವರೆಗೆ ಅಂದರೆ ಜ.31 ರವರೆಗೆ ಶಾಲಾ- ಕಾಲೇಜಿಗೆ ಪಾವತಿಸಿದ ರಶೀದಿ ಜೊತೆ, ನಿಗಮದ ಬಸ್ಸುಗಳಲ್ಲಿ ಸಂಬಂಧಪಟ್ಟ ಮಾರ್ಗದಲ್ಲಿ ಅಥವಾ ಹೊಸ ವಿಳಾಸದಲ್ಲಿರುವ ಶಾಲಾ- ಕಾಲೇಜಿಗೆ ತೆರಳಲು ಅನುಮತಿ ನೀಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕ ವಿದ್ಯಾರ್ಥಿ ಬಸ್ ಪಾಸಿಗೆ ಅರ್ಜಿ ಸಲ್ಲಿಸಬೇಕು. ಅಲ್ಲಿ ಬಸ್ ಪಾಸ್‍ನ ಅಗತ್ಯ ಸೂಚನೆ ಮಾರ್ಗದರ್ಶನ ನೀಡಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Check Also
Close
Back to top button