ಕಾರವಾರ: ಉತ್ತರಕನ್ನಡದಲ್ಲಿ ಇಂದು 28 ಕರೊನಾ ಕೇಸ್ ದಾಖಲಾಗಿದೆ. ಇದೇ ವೇಳೆ ಜಿಲ್ಲೆಯಲ್ಲಿ ಮೂವರು ಶಿಕ್ಷಕರಿಗೆ ಕರೊನಾ ಕಾಣಿಸಿಕೊಂಡಿದೆ. ಭಟ್ಕಳದ ಒಬ್ಬರು,ಹೊನ್ನಾವರದ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಜಿಲ್ಲೆಯ 4,500 ಶಿಕ್ಷಕರಿಗೆ ಕರೊನಾ ಟೆಸ್ಟ್ ಮಾಡಿಸಲಾಗಿತ್ತು. ಇದರಲ್ಲಿ ಕೆಲವರ ವರದಿ ಬಂದಿದ್ದು,ಹಲವು ವರದಿ ಬರಬೇಕಿದೆ.
ಕುಮಟಾದ ಮೂವರಲ್ಲಿ ಪಾಸಿಟಿವ್:
ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 3 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ಇಂದು ದಾಖಲಾದ 3 ಪ್ರಕರಣವು ಸಹ ತಾಲೂಕಿನ ಹಂದಿಗೋಣ ಭಾಗದಲ್ಲೇ ಕಂಡುಬಂದಿದೆ. ಹಂದಿಗೋಣದ 49 ವರ್ಷದ ಪುರುಷ, 20 ವರ್ಷದ ಯುವಕ ಮತ್ತು 23 ವರ್ಷದ ಯುವಕನಲ್ಲಿ ಕರೊನಾ ಪಾಸಿಟಿವ್ ಬಂದಿದೆ. ಇಂದು 3 ಪ್ರಕರಣ ಪತ್ತೆಯಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 2009ಕ್ಕೆ ಏರಿಕೆಯಾಗಿದೆ.
ಇದೇ ವೇಳೆ, ಹೊನ್ನಾವರ ತಾಲೂಕಿನಲ್ಲಿ ಇಂದು ಒಬ್ಬರಲ್ಲಿ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಗ್ರಾಮೀಣ ಭಾಗವಾದ ಸಾಲಕೋಡಿನ 68 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಶಿರಸಿಯಲ್ಲಿಂದು 9 ಕರೊನಾ ಕೇಸ್ ದೃಢ
ಶಿರಸಿ: ತಾಲೂಕಿನಲ್ಲಿ ಶನಿವಾರ ಒಂಬತ್ತು ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಇಂದು ಕೂರ್ಸೆ ಕಂಪೌಂಡ್ ನಲ್ಲಿ 4, ಬನವಾಸಿ ರಸ್ತೆಯಲ್ಲಿ 1, ಕೊರ್ಲಕಟ್ಟಾದಲ್ಲಿ 1, ಕೆ ಎಚ್ ಬಿ ಕಾಲೋನಿಯಲ್ಲಿ, ಮಂಜಳ್ಳಿಯಲ್ಲಿ 1, ಹುಲೇಕಲ್ ರಸ್ತೆಯಲ್ಲಿ 1 ಕೇಸ್ ಪಾಸಿಟಿವ್ ಬಂದಿದೆ.
ಈವರೆಗೆ 1637 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿದ್ದು, 1596 ಮಂದಿ ಗುಣಮುಖರಾಗಿದ್ದಾರೆ.
ವಿಸ್ಮಯ ನ್ಯೂಸ್ ಕಾರವಾರ