ಕಡುಕoದುಬಣ್ಣದ ಬರ್ಮಡಾ, ಕಡುನೀಲಿ ಬಣ್ಣದ ಟೀಶರ್ಟ್ ಧರಿಸಿದ್ದಾನೆ: ಈತನ ಗುರುತು ಸಿಕ್ಕರೆ ಮಾಹಿತಿ ನೀಡಿ

ಕಾರವಾರ: ತಾಲೂಕಿನ ಕಣಸಗಿರಿ ಗ್ರಾಮದ ಕಾಳಿ ನದಿಯ ಬಲದಂಡೆಯ ಹತ್ತಿರ ಅಪರಿಚಿತ ಶವವೊಂದು ಪತ್ತೆಯಾಗಿದ್ದು, ಗುರುತು ಪತ್ತೆಗೆ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಸುಮಾರು 35 ರಿಂದ 40 ವರ್ಷ ಎಂದು ಅಂದಾಜಿಸಲಾಗಿದೆ. ಕಾಲುಜಾರಿ ಬಿದ್ದ ಮೃತಪಟ್ಟಿದ್ದಾನೋ? ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೋ ಎಂಬುದು ಇನ್ನು ತಿಳಿದುಬಂದಿಲ್ಲ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಕಾಳಿ ನದಿಯ ನೀರಿನಲ್ಲಿ ಮೃತದೇಹವು ತೇಲಿಬಂದು ಕಣಸಗಿರಿ ಸಮೀಪ ತೇಲಿಬಂದಿದೆ. ಕಂಡುಕoದುಬಣ್ಣದ ಬರ್ಮಡಾ, ಕಡುನೀಲಿ ಬಣ್ಣದ ಟೀಶರ್ಟ್ ಧರಿಸಿದ್ದು, ಗುರುತು ಸಿಕ್ಕಲ್ಲಿ ಮಾಹಿತಿ ನೀಡುವಂತೆ ಪೊಲೀಸರು ಕೋರಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version