ಡ್ರಗ್ಸ್ ಜಾಲ: ಬೆಂಗಳೂರಿನ ಸಿಸಿಬಿ ಪೊಲೀಸರಿಂದ ಭಟ್ಕಳದಲ್ಲಿ ದಿಢೀರ್ ದಾಳಿ

ಭಟ್ಕಳ: ಡ್ರಗ್ಸ್ ಜಾಲಕ್ಕೆ ಸಂಬoಧಿಸಿದoತೆ ಬೆಂಗಳೂರಿನ ಸಿಸಿಬಿ ಪೊಲೀಸರು ಭಟ್ಕಳ ಸುಲ್ತಾನ ಸ್ಟ್ರೀಟ್ನ ಮನೆಯೊಂದರ ಮೇಲೆ ದಿಢೀರ್ ದಾಳಿ ನಡೆಸಿ ವಿಚಾರಣೆ ನಡೆಸಿದ್ದಾರೆ. ಕಳೆದ ಸಪ್ಟಂಬರ್ ತಿಂಗಳಲ್ಲಿ ಡ್ರಗ್ಸ್ ಮಾರಾಟಕ್ಕೆ ಸಂಬoಧಿಸಿದoತೆ ಖಚಿತ ಮಾಹಿತಿ ಮೇರೆಗೆ ಇದೆ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರುಮ, ಏನೂ ಸಿಗದೇ ಬರಿಗೈಯಲ್ಲಿ ವಾಪಾಸು ಬಂದಿದ್ದರು. ಪುನಃ ಸಿಸಿಬಿ ಪೊಲೀಸರು ಇದೆ ಮನೆ ಮೇಲೆ ಮತ್ತೆ ದಾಳಿ ನಡೆಸಿದ್ದಾರೆ.

ಡ್ರಗ್ ಪೆಡ್ಲರ್ ಮೆಸ್ಸಿ ಎಂಬ ಆರೋಪಿಯು ಇದೆ ಕುಟುಂಬದ ಸದಸ್ಯ ಎಂದು ತಿಳಿದುಬಂದಿದೆ. ಕಳೆದ ಸೆಪ್ಟಂಬರನಿoದ ಈತನು ತಲೆಮರೆಸಿಕೊಂಡಿದ್ದು ವಿಚಾರಣೆಗಾಗಿ ಭಟ್ಕಳಕ್ಕೆ ಆಗಮಿಸಿದ್ದರು ಎನ್ನಲಾಗುತ್ತಿದೆ. ವಿಚಾರಣೆ ಸಂದರ್ಭದಲ್ಲಿ ಕುಟುಂಬ ಸದಸ್ಯರ ಮಾಹಿತಿ, ದಾಖಲೆ ಕಲೆ ಹಾಕಿರುವ ಸಿಸಿಬಿ ಪೊಲೀಸರು ಈತನ ಮನೆ ಮೇಲೆ ನಿಗಾ ಇರಿಸುವಂತೆ ಸ್ಥಳೀಯ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಸಿಸಿಬಿ ಇನ್ಸ್ ಪೆಕ್ಟರ್ ವಿರೂಪಾಕ್ಷ ತಂಡದ ಜೊತೆ ಭಟ್ಕಳ ಸಿಪಿಐ ದಿವಾಕರ್, ಸಬ್ ಇನ್ಸ್ ಪೆಕ್ಟರ್ ಭರತ್ ಇದ್ದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version