Join Our

WhatsApp Group
Info
Trending

ಅಕ್ರಮ ಗೋವಾ ಮದ್ಯ ಮಾರಾಟ: ಆರೋಪಿ ವಿರುದ್ಧ ಪ್ರಕರಣ ದಾಖಲು

ಕಾರವಾರ: ಅಕ್ರಮ ಗೋವಾ ಮದ್ಯ ಮನೆಯಲ್ಲಿಟ್ಟು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಅಬಕಾರಿ ಸಿಬ್ಬಂದಿ ಮದ್ಯ ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುವ ಘಟನೆ ಕಾರವಾರ ತಾಲೂಕಿನ ಸುಂಕೇರಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ದೊಡ್ಡ ಮಶ್ಜಿದಿಯ ಹತ್ತಿರದ ನಿವಾಸಿಯಾದ ಜಯಪ್ರಕಾಶ್ ಜೋಷಿ ಎಂಬುವರ ಮನೆಯಲ್ಲಿ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು 16 ಸಾವಿರ ರೂ ಮೌಲ್ಯದ 39 ಲೀಟರ ಗೋವಾ ಮದ್ಯ ಪತ್ತೆ ಹಚ್ಚಿ ಆರೂಪಿ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಅಬಕಾರಿ ನಿರೀಕ್ಷಕಿ ಸುವರ್ಣಾ ಬಿ. ನಾಯ್ಕ ಅವರ ನೇತೃತ್ವದಲ್ಲಿ ನಿರೀಕ್ಷಕರಾದ ಬಸವರಾಜ, ಅಬಕಾರಿ ರಕ್ಷಕರಾದ  ಸಿವಾನಂದ, ಪ್ರವೀಣ, ವಿರೇಶ, ನಾಗರಾಜ,ಪಾಟೀಲ, ರವಿ ಮತ್ತು ದಿನಗುಲಿ ವಾಹನ ಚಾಲಕ ಪರೇಶ್ ದಾಳಿಯಲ್ಲಿ ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್, ಕಾರವಾರ

Check Also
Close
Back to top button