Join Our

WhatsApp Group
Info
Trending

ಕರೊನಾ ಸಂಜೀವಿನಿ

ಮೂಡಿದೆ ಆಸೆ ಕಮರಿದಾ ಮನಕೆ
ಬರುತಲಿದೆ ಇನ್ನೇನು ಕರೊನಾ ಲಸಿಕೆ
ದುಗುಡವಾ ಮರೆತು ಆಗಲಿ ಬಳಕೆ
ಇದರಿಂದಾಗಲಿ ನೆಮ್ಮದಿಯ ಬದುಕೆ

ಕಳೆದೊಂದು ವರುಷದಿ ಆಗಿರುವ ಹಾನಿ
ಮರೆಯಲು ಸಾಧ್ಯವೇ ಕರೊನಾ ಕಹಾನಿ
ಹಗಲಿರುಳು ಶ್ರಮಪಟ್ಟ ನಮ್ಮ ವಿಜ್ಞಾನಿ
ಬರುತಲಿದೆ ಈಗ ಲಸಿಕೆ ಸಂಜೀವಿನಿ

ಲಸಿಕೆ ಬಂತೆoದು ಪಡಬೇಡಿ ಅವಸರ
ಮರೆಯಬೇಡಿ ಹಾಕಲು ಸೆನಿಟೈಝರ್
ಇರಲಿ ನಿಮ್ಮೊಳಗೆ ಆಗಾಗ ಅಂತರ
ಮರೆಯದಿರಿ ಮಾಸ್ಕ ಧರಿಸಲು ನಿರಂತರ

ಕಾದಿಹರು ಜನರು ಲಸಿಕೆಯಾ ಪಡೆಯಲು
ನೀಡಿದೆ ಅನುಮತಿ ಯೋಧರಿಗೆ ಮೊದಲು
ಸಿಗಬಹುದು ಲಸಿಕೆ ಎಲ್ಲ ಜನರಲೂ
ಸದ್ಯದಲ್ಲೇ ಅಂತ್ಯ ಕರೊನಾ ಕಾಣಲು

ಕಳೆದ ದಿನಗಳ ಹಾಕಲು ಮೆಲಕು
ನಶಿಸಿ ಹೋದ ಯೋಧರಾ ಬದುಕು
ಶಾಂತಿಯನು ಕೊಡಲು ಅವರ ಆತ್ಮಕೂ
ಬಾರದಿರಲು ಮತ್ತೆ ಕರೊನಾದಂತ ಕೊಳಕ

ದಿನೇಶ್ ಜಿ ನಾಯ್ಕ, ಹಿರಿಯ ಆರೋಗ್ಯ ನಿರೀಕ್ಷಕರು
ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಕುಮಟಾ

Check Also
Close
Back to top button