Join Our

WhatsApp Group
Info
Trending

ಹಳದೀಪುರದಲ್ಲಿ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನ

ಹಳದೀಪುರ: ಅಯೋಧ್ಯಾ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ಹಳದೀಪುರದಲ್ಲಿ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ವಾಗ್ಮಿಗಳಾದ ಎಚ್ . ಎನ್ . ಪೈ ರಾಮಮಂದಿರ ನಮ್ಮೆಲ್ಲರ ಶ್ರಧ್ಧಾಭಕ್ತಿಯ ಸಂಕೇತ . ಈ ಭವ್ಯ ಮಂದಿರಕ್ಕೆ ಅಯೋಧ್ಯಾ ರಾಮಮಂದಿರ ಟ್ರಸ್ಟನ ಕಾರ್ಯಕರ್ತರು ನಮ್ಮ ಮನೆಗೆ ಭೇಟಿಯಿತ್ತಾಗ ಸ್ವ ಇಚ್ಛೆಯಿಂದ ನಿಧಿಯನ್ನು ಸಮರ್ಪಿಸೋಣ ಎಂದರು. ಶೋಭಾಯಾತ್ರೆಯು ಸಾಲಿಕೇರಿಯ ಮಾರಿಕಾಂಬಾ ದೇವಾಲಯದಲ್ಲಿ ಆರಂಭಗೊoಡು ಹಳದೀಪುರ ಪಂಚಾಯತದ ಎಲ್ಲಾ ವಾರ್ಡಗಳಲ್ಲೂ ಸಂಚರಿಸಿ ಹಳದೀಪುರ ರಾಮಮಂದಿರದಲ್ಲಿ ಕೊನೆಗೊಂಡಿತು.

ಈ ವೇಳೆ ಹೊನ್ನಾವರ ಬಿಜೆಪಿ ಯುವಮೋರ್ಚಾದ ಪ್ರಧನ ಕಾರ್ಯದರ್ಶಿಗಳಾದ ಕೃಷ್ಣ ಜೋಶಿ ಸಂಕೊಳ್ಳಿ. ಶಿವಾನಂದ ನಾಯ್ಕ, ಸೀತಾರಾಮ್ ನಾಯ್ಕ, ನಾಗಪ್ಪ ನಾಯ್ಕ ಕಾಸೊಳ್ಳಿ., ಶ್ರೀ ಗಣೇಶ್ ಪೈ, ಪರಮೇಶ್ವರ ನಾಯ್ಕ ಸೇರಿದಂತೆ ಅನೇಕ ರಾಮಭಕ್ತರು ಇದ್ದರು.

ವಿಸ್ಮಯ ನ್ಯೂಸ್, ಹೊನ್ನಾವರ

Check Also
Close
Back to top button