ಸಮರ್ಥವಾಗಿ ಸಚಿವಸ್ಥಾನ ನಿಭಾಯಿಸಿದರೂ ಸಕ್ಕರೆ ಖಾತೆ ಹಿಂದಕ್ಕೆ ಪಡೆದ ಸಿಎಂ
ಜಿಲ್ಲೆಯ ಜನರಲ್ಲಿ, ಅಭಿಮಾನಿಗಳಲ್ಲಿ ಆಕ್ರೋಶ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವುದರ ಜೊತೆಗೆ ಕೆಲವು ಖಾತೆಗಳನ್ನು ಸಚಿವರಿಗೆ ಮರು ಹಂಚಿಕೆ ಮಾಡಿದ್ದಾರೆ. ಈ ಸಂಬoಧ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಸಕ್ಕರೆ ಮತ್ತು ಕಾರ್ಮಿಕ ಸಚಿವರಾಗಿದ್ದ ಶಿವರಾಮ ಹೆಬ್ಬಾರ್, ಉತ್ತಮವಾಗಿ ಕಾರ್ಯನಿರ್ವಹಿಸಿ, ಜನಮೆಚ್ಚುಗೆ ಗಳಿಸಿದ್ದರು.
ಜನರೊಂದಿಗೆ ಬೆರೆತು ಎರಡೂ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ಆದರೀಗ ಶಿವರಾಮ್ ಹೆಬ್ಬಾರ್ ಅವರಿಂದ ಸಕ್ಕರೆ ಖಾತೆಯನ್ನು ಹಿಂದಕ್ಕೆ ಪಡೆಯಲಾಗಿದೆ.
ಹೌದು, ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ನಿರಾಸೆಯಾಗಿದ್ದು, ಅವರ ಕೈಯಲ್ಲಿದ್ದ ಸಕ್ಕರೆ ಖಾತೆಯನ್ನು ಹಿಂದಕ್ಕೆ ಪಡೆಯಲಾಗಿದೆ. ಈಗ ಕೇವಲ ಕಾರ್ಮಿಕ ಖಾತೆ ಮಾತ್ರ ಅವರಿಗಿದೆ. ಕೆ.ಗೋಪಾಲಯ್ಯ ಅವರಿಗೆ ಸಕ್ಕರೆ ಖಾತೆಯನ್ನು ನೀಡಲಾಗಿದೆ. ಖಾತೆ ಬದಲಾವಣೆ ಹಿನ್ನೆಲೆಯಲ್ಲಿ ಹಲವಾರು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದು, ಸಚಿವ ಸುಧಾಕರ್ ಅವರ ನಿವಾಸದಲ್ಲಿ ಸಭೆ ನಡೆಸಿದ್ದಾರೆ.
ಕೆಲವರು ಬಹಿರಂಗವಾಗಿ ಅಸಮಾಧಾನ ತೋರ್ಪಡಿಸಿದ್ದರೆ, ಇನ್ನು ಕೆಲವರು ಸಿಎಂ ಭೇಟಿ ಮಾಡಲು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುಮಕೂರಿನಿಂದ ವಾಪಸ್ ಬಂದ ನಂತರ ಅಸಮಾಧಾನಿತರು ಭೇಟಿಯಾಗುವ ಸಾಧ್ಯತೆ ಇದೆ.
ನೂತನ ಸಚಿವರ ಖಾತೆ ಹಂಚಿಕೆ ವಿವರ ಇಂತಿದೆ:
ಸಿಎಂ ಯಡಿಯೂರಪ್ಪ, ಬೆಂಗಳೂರು ಅಭಿವೃದ್ಧಿ ಮತ್ತು ಇಂಧನ
ಉಮೇಶ್ ಕತ್ತಿ – ಆಹಾರ ಮತ್ತು ನಾಗರಿಕ ಪೂರೈಕೆ
ಬಸವರಾಜ ಬೊಮ್ಮಾಯಿ – ಗೃಹ ಮತ್ತು ಕಾನೂನು
ಜೆ.ಸಿ. ಮಾಧುಸ್ವಾಮಿ – ವೈದ್ಯಕೀಯ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಸಿ.ಪಿ.ಯೋಗೇಶ್ವರ್ – ಸಣ್ಣ ನೀರಾವರಿ
ಆರ್. ಶಂಕರ್ – ಪೌರಾಡಳಿತ ಮತ್ತು ರೇಷ್ಮೆ
ಎಂಟಿಬಿ ನಾಗರಾಜ್ – ಅಬಕಾರಿ
ಮುರುಗೇಶ್ ನಿರಾಣಿ – ಗಣಿಗಾರಿಕೆ
ಎಸ್. ಅಂಗಾರ – ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ
ಅರವಿಂದ ಲಿಂಬಾವಳಿ – ಅರಣ್ಯ ಖಾತೆ
ನಾರಾಯಣಗೌಡ – ಯುವಜನ ಮತ್ತು ಕ್ರೀಡೆ
ಸಿ. ಗೋಪಾಲಯ್ಯ – ತೋಟಗಾರಿಕೆ ಇಲಾಖೆ
ಆನಂದ್ ಸಿಂಗ್ – ಪ್ರವಾಸೋದ್ಯಮ ಮತ್ತು ಪರಿಸರ
ಶಿವರಾಂ ಹೆಬ್ಬಾರ್ – ಕಾರ್ಮಿಕ
ಪ್ರಭು ಚವ್ಹಾಣ್ – ಪಶುಸಂಗೋಪನೆ
ಕೆ.ಸುಧಾಕರ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಸಿ.ಸಿ. ಪಾಟೀಲ್ – ಸಣ್ಣ ಕೈಗಾರಿಕೆ
ಕೋಟ ಶ್ರೀನಿವಾಸ ಪೂಜಾರಿ – ಮುಜರಾಯಿ
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,
ಮದುವೆ ಆಗುತ್ತಿಲ್ಲವೇ? ಉದ್ಯೋಗ ಸಮಸ್ಯೆಯೇ? ಇಲ್ಲಿದೆ ಪರಿಹಾರ
ದೈವಜ್ಞ ವಿದ್ಯಾಭೂಷಣ ಪ್ರಶಸ್ತಿ ವಿಜೇತರು, ದುರ್ಗಾದೇವಿ ಉಪಾಸಕರಾದ ಪಂಡಿತ ಶ್ರೀ ವಿ.ರಾಘವೇಂದ್ರ ರಾವ್ ಶಾರ್ಮಾ ಅವರು ಕೆಲವೇ ದಿನಗಳಲ್ಲಿ ಈ ಸಮಸ್ಯೆಗಳಿಗೆ ಮುಕ್ತಿ ನೀಡುತ್ತಾರೆ. ಇವರು ಕಾಶಿಯಲ್ಲಿ ಜ್ಞಾನ ತಪಸ್ಸಿನಿಂದ ಯಂತ್ರ-ಮoತ್ರ-ವಾಕ್ಯಸಿದ್ಧಿ-ಸoಪಾದಿಸಿದ್ದು, ನೀವು ದೂರವಾಣಿ ಮೂಲಕ ಸಂಪರ್ಕಿಸಿ, ಪರಿಹಾರ ಕಂಡುಕೊಳ್ಳಬಹುದು. ಕೂಡಲೇ ಸಂಪರ್ಕಿಸಿ: 9440269990