ಯಲ್ಲಾಪುರ: ಇತ್ತಿಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಅಪಘಾತ ಪ್ರಕರಣ ಹೆಚ್ಚುತ್ತಲೇ ಇದೆ. ಚಾಲಕರ ನಿರ್ಲಕ್ಷ್ಯ ಚಾಲನೆಯಿಂದ ಇಂತಹ ಪ್ರಕರಣ ಹೆಚ್ಚುತ್ತಿದೆ. ಹೌದು, ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಭಾಗಕ್ಕೆ ಬರುತಿದ್ದ ಲಾರಿಯೊಂದು ಹೈವೇ ಪೆಟ್ರೋಲಿಂಗ್ ಪೊಲೀಸ್ ವಾಹನಕ್ಕೆ ಗುದ್ದಿ ಇಬ್ಬರು, ಹೆಡ್ ಕಾನ್ ಸ್ಟೇಬಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಯಲ್ಲಾಪುರ ಹುಬ್ಬಳ್ಳಿ ಮಾರ್ಗದ ಹೆದ್ದಾರಿಯಲ್ಲಿ ನಡೆದಿದೆ.
ಮಾರುತಿ ಎಂ, ಹೆಡ್ ಕಾನ್ ಸ್ಟೇಬಲ್ , ಕಾರವಾರ ಮೂಲದ ವೆಂಕಣ್ಣ ರೆಡ್ಡಿ, ಹೆಡ್ ಕಾನ್ ಸ್ಟೇಬಲ್ ಗಂಭೀರ ಗಾಯಗೊಂಡವರಾಗಿದ್ದು ,ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬoಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.
ವಿಸ್ಮಯ ನ್ಯೂಸ್, ಯಲ್ಲಾಪುರ