Info
Trending

ಚಿತ್ರನಟಿ ಜಯಶ್ರೀ ಆತ್ಮಹತ್ಯೆ: ಇದಕ್ಕೂ ಮೊದಲು ಏಳು ಬಾರಿ ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದರು

ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರು
ಸುದೀಪ್ ಸೇರಿದಂತೆ ಕುಟುಂಬಸ್ಥರು ಧರ್ಯತುಂಬಿದ್ದರು

ಬೆoಗಳೂರು: ಸ್ಯಾಂಡಲ್ ವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಗತಿ ಲೇ ಔಟ್ ನಲ್ಲಿರುವ ಸಂಧ್ಯಾಕಿರಣ ಪುನರ್ವಸತಿ ಕೇಂದ್ರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಜಯಶ್ರೀ ರಾಮಯ್ಯ ಶವ ಪತ್ತೆಯಾಗಿದೆ.

ಜಯಶ್ರೀ ಅನೇಕ ಬಾರಿ ಆತ್ಮಹತ್ಯೆ ಪ್ರಯತ್ನ ಪಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆಯೇ ಅವರು ನಾನು ಏಳು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ. ಬದುಕು ಸಾಕಾಗಿದೆ. ನನಗೆ ದಯಾಮರಣ ಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದರು. ಇದಾದ ಬಳಿಕ ಜಯಶ್ರೀ ಅವರಿಗೆ ಸ್ನೇಹಿತರು ಧೈರ್ಯ ತುಂಬಿದ್ದರು. ಆದರೆ ಕುಟುಂಬದ ಸಮಸ್ಯೆಯಿಂದ ಬಳಲುತ್ತಿದ್ದ ಜಯಶ್ರೀ ಆ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ಜಯಶ್ರೀ ಸುಮಾರು ಒಂದು ವರ್ಷದಿಂದ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.

ಕಳೆದ ಹಲವು ತಿಂಗಳಿನಿoದ ಖಿನ್ನತೆಯಿಂದ ಬಳಲುತ್ತಿದ್ದ ಜಯಶ್ರೀ, ಜುಲೈ 22ರಂದು ಆತ್ಮಹತ್ಯೆ ಪ್ರಯತ್ನ ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಖಿನ್ನತೆಯಿಂದ ಬಳಲುತ್ತಿದ್ದು, ಈ ಜಗತ್ತಿಗೆ ಗುಡ್‌ಬೈ ಹೇಳುತ್ತೇನೆ’ ಎಂಬರ್ಥದ ಪೋಸ್ಟ್ ಹಾಕಿಕೊಂಡಿದ್ದರು ಅವರು. ಆ ಸಮಯದಲ್ಲಿ ಅವರ ಅಭಿಮಾನಿ ವಲಯದಲ್ಲಿ ಸಾಕಷ್ಟು ಆತಂಕ ಮನೆ ಮಾಡಿತ್ತು. ಅವರಿಗೆ ಕರೆ ಮಾಡಿದರೂ, ಸಂಪರ್ಕ ಸಾಧ್ಯವಾಗಿರಲಿಲ್ಲ. ಖಿನ್ನತೆಯಿಂದ ಒಳಗಾಗಿದ್ದ ಅವರನ್ನು ರಿಹ್ಯಾಬಿಲಿಟೇಷನ್ ಕೇಂದ್ರಕ್ಕೆ ಸೇರಿಸಲಾಗಿತ್ತು. ಅಲ್ಲಿಂದಲೇ ಅವರು ಈ ರೀತಿ ಪೋಸ್ಟ್ ಮಾಡಿದ್ದರು.

ಕೆಲ ಘಂಟೆಗಳ ಬಳಿಕ ‘ನಾನು ಸರಿಯಾಗಿ, ಸುರಕ್ಷಿತವಾಗಿದ್ದೇನೆ. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ’ ಎಂದು ಜಯಶ್ರೀ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿತ್ತು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button