Join Our

WhatsApp Group
Info
Trending

ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ಭಕ್ತಿಗೀತೆ ಅಂತರ್ವಾಣಿ ಲೋಕಾರ್ಪಣೆ

ಭಟ್ಕಳ- ಉತ್ತರ ಕನ್ನಡ ಜಿಲ್ಲೆಯ ದಾಸಕವಿಯೆಂದೇ ಹೆಸರಾದ ಮಂಜುಸುತ ಜಲವಳ್ಳಿ ಯವರು ಬರೆದ ಅಂತರ್ವಾಣಿ ಪುಸ್ತಕ ಇಂದು ಲೋಕಾರ್ಪಣೆಗೊಂಡಿತು.
ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಕುರಿತು ಮಂಜುಸುತ ಎಂಬ ಕಾವ್ಯನಾಮದಲ್ಲಿ ಕೃಷ್ಣ ನಾಯ್ಕ ಜಲವಳ್ಳಿ ಅವರು ಬರೆದ ಭಕ್ತಿಗೀತೆಗಳ ಪುಸ್ತಕ ಇದಾಗಿದ್ದು, ಗಣರಾಜ್ಯೋತ್ಸವದ ಶುಭದಿನದಂದು ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಬಿಡುಗಡೆಗೊಳಿಸಲಾಯಿತು.

ದೇವಿಯ ಪ್ರೇರಣೆ ಆಶಿರ್ವಾದವೇ ಈ ಭಕ್ತಿ ಗೀತೆ ಬರೆಯಲು ನನಗೆ ಕಾರಣವಾಗಿದ್ದು ನಾನು ಇಲ್ಲಿ ನೆಪಮಾತ್ರ ಎಂದು ಪುಸ್ತಕದ ರಚನೆಕಾರರಾದ ಮಂಜುಸುತರವರು ನುಡಿದರು.

ದಾಸ ಶ್ರೇಷ್ಠ ರಾದ ಪುರಂದರ ದಾಸರು,ಕನಕದಾಸರನ್ನು ನಾವು ಕೇಳಿದ್ದೇವೆ ಮಾತ್ರ ಆದರೆ ಇಂದು ಅಂತ ಸಾಲಲ್ಲಿ ನಿಲ್ಲಬಲ್ಲಂತ ಹಿರಿಯರಾದ ಮಂಜುಸುತರವರು ನಮ್ಮೆದುರು ಇದ್ದಾರೆ.ಇಂತಹ ಹಿರಿಯರಿಂದ ಈ ಕೃತಿ ಬರೆಯಲ್ಪಟ್ಟಿದೆ. ಅದನ್ನು ಪ್ರಕಟಿಸುವ ಅವಕಾಶ ನಮಗೆ ಸಿಕ್ಕಿದ್ದೇ ಒಂದು ಭಾಗ್ಯ ಎಂದು ಸಾಹಿತಿ ಉಮೇಶ ಮುಂಡಳ್ಳಿ ನುಡಿದರು.

ಭಟ್ಕಳದ ನಿನಾದ ಸಾಹಿತ್ಯ ಸಂಗೀತ ಸಂಚಯದ ಅಡಿಯಲ್ಲಿ ಸರಳವಾಗಿ ದೇವಿಯ ಭಕ್ತರು ಅರ್ಚಕರ ಸಮ್ಮುಖದಲ್ಲಿ ನಡೆದ ಪುಸ್ತಕ ಬಿಡುಗಡೆಯಲ್ಲಿ ಅಂತರ್ವಾಣಿಯ ಕೃತಿಕಾರರಾದ ಮಂಜುಸುತ ಜಲವಳ್ಳಿ, ನಿನಾದ ಸಂಚಾಲಕ ಹಾಗೂ ಜಿಲ್ಲಾ ಕಸಾಪ ಕೋಶಾಧ್ಯಕ್ಷ ಉಮೇಶ ಮುಂಡಳ್ಳಿ, ಅರ್ಚಕರಾದ ಮಹೇಶ ಭಟ್ , ನಿನಾದ ಪ್ರಧಾನ ಸಂಚಾಲಕಿ ರೇಷ್ಮಾ ಉಮೇಶ, ಉತ್ಥಾನ ಉಮೇಶ,ಹಿರಿಯರಾದ ಮಂಜುನಾಥ ನಾಯ್ಕ, ದೇವಿಯ ಭಜಕರಾದ ಆನಂದ ಮೊಗೇರ ಚಂದ್ರ ಮೊಗೇರ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಿನಾದ ಸಂಘಟನೆಯಿಂದ ದಾಸ ಸಾಹಿತಿಗಳು ಹಿರಿಯರಾದ ಮಂಜುಸುತ ಜಲವಳ್ಳಿಯವರನ್ನು ಸನ್ಮಾನಿಸಲಾಯಿತು.

ವಿಸ್ಮಯ ನ್ಯೂಸ್ ಭಟ್ಕಳ

Check Also
Close
Back to top button