ಅಂಕೋಲಾ ತಾಲೂಕಿನ 21 ಗ್ರಾಪಂ. ಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ನಿಗದಿ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಿಗದಿ
ಮಹಿಳೆಯರಿಗೆ ಹೆಚ್ಚಿನ ಸ್ಥಾನ

ಅಂಕೋಲಾ : ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಅವರ ಅಧ್ಯಕ್ಷತೆಯಲ್ಲಿ ತಾಲೂಕಿನ 21 ಗ್ರಾಮ ಪಂಚಾಯತಿಗಳ 2020ರ 1ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗದಿಪಡಿಸಲಾಯಿತು. ಶನಿವಾರ ಪಟ್ಟಣದ ಸ್ವಾತಂತ್ರ್ಯ ಸ್ಮಾರಕ ಭವನದಲ್ಲಿ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು, ವಿವಿಧ ಅಧಿಕಾರಿಗಳು, ಚುನಾಯಿತ ಸದಸ್ಯರು ಮತ್ತು ಕಂದಾಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು..

ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ಮೀಸಲಾತಿ ವಿವರ : ಸುಂಕಸಾಳ :ಅಧ್ಯಕ್ಷ-ಹಿಂದುಳಿದ ‘ಅ’ ವರ್ಗ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಹಿಲ್ಲೂರು :ಅಧ್ಯಕ್ಷ-‘ಅ’ವರ್ಗ,ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಹಾರವಾಡ :ಅಧ್ಯಕ್ಷ-‘ಅ’ವರ್ಗ, ಉಪಾಧ್ಯಕ್ಷ-‘ಬ’ವರ್ಗ ಮಹಿಳೆ, ಡೋಂಗ್ರಿ :ಅಧ್ಯಕ್ಷ-‘ಅ’ವರ್ಗ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಅಚವೆ: ಅಧ್ಯಕ್ಷ-‘ಅ’ವರ್ಗ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಬೆಳಸೆ :ಅಧ್ಯಕ್ಷ-‘ಅ’ವರ್ಗ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯಕ್ಕೆ ಮೀಸಲಾಗಿದೆ.

ಅವರ್ಸಾ: ಅಧ್ಯಕ್ಷ-‘ಬ’ವರ್ಗ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಅಗಸೂರು: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಮೊಗಟಾ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-‘ಅ’ವರ್ಗಮಹಿಳೆ,ಅಗ್ರಗೋಣ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-‘ಅ’ವರ್ಗ ಮಹಿಳೆ, ಬೆಳಂಬಾರ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಭಾವಿಕೇರಿ:ಅಧ್ಯಕ್ಷ-ಸಾಮಾನ್ಯ,ಉಪಾಧ್ಯಕ್ಷ-ಸಾಮಾನ್ಯ ಮಹಿಳೆಗೆ ನಿಗದಿಯಾಗಿದೆ.

ವಾಸರಕುದ್ರಿಗೆ: ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ-ಎಸ್‍ಸಿ ಮಹಿಳೆ, ಹೊನ್ನೆಬೈಲ್: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-‘ಅ’ವರ್ಗ ಮಹಿಳೆ,ಸಗಡಗೇರಿ: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-‘ಅ’ವರ್ಗ, ಶೆಟಗೇರಿ: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ವಂದಿಗೆ: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಬೊಬ್ರುವಾಡ: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಅಲಗೇರಿ: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಹಟ್ಟಿಕೇರಿ: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-‘ಅ’ವರ್ಗ, ಬೇಲೇಕೇರಿ: ಅಧ್ಯಕ್ಷ-ಎಸ್‍ಸಿ ಮಹಿಳಾ, ಉಪಾಧ್ಯಕ್ಷ-‘ಅ’ ವರ್ಗ, ನಿಗದಿಯಾಗಿದೆ.

ತಹಸೀಲ್ದಾರ ಉದಯ ಕುಂಬಾರ ಸ್ವಾಗತಿಸಿದರು, ಎಡಿಸಿ ಕೃಷ್ಣಮೂರ್ತಿ ಎಚ್.ಕೆ. ಮೀಸಲಾತಿ ಮತ್ತು ಲಾಟರಿ ಪ್ರಕ್ರಿಯೆ ನಡೆಸಿಕೊಟ್ಟರು. ತಾಂತ್ರಿಕ ಶ್ರೀಕಾಂತ ಜೋಶಿ ತಂತ್ರಾಂಶದ ವಿವರಣೆ ನೀಡಿದರು. ಎಸಿ ಎಂ.ಅಜಿತ ರೈ ಉಪಸ್ಥಿತರಿದ್ದರು.

ರಾಜೇಶ ನಾಯಕ ಸೂರ್ವೆ ನಿರೂಪಿಸಿದರು. ಅಮರ ನಾಯ್ಕ, ರಾಘವೇಂದ್ರ ಜನ್ನು, ಸುರೇಶ ಹರಿಕಂತ್ರ, ಭಾರ್ಗವ ನಾಯಕ, ಭಾವನಾ ಗಾಂವಕರ, ವಿದ್ಯಾನಂದ ಗಾಂವ ಕರ, ಅಶ್ವಿನ್ ನಾಯ್ಕ ಸೇರಿದಂತೆ ಕಂದಾಯ ಇಲಾಖೆ ಮತ್ತು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿಗಳು ಸಹಕರಿಸಿದರು. ವಿವಿಧ ಗ್ರಾಪಂ.ಗಳ ಪಿಡಿಓಗಳು ಹಾಜರಿದ್ದರು. ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಲ್ಹಾದ್ ಸೇರಿದಂತೆ ತಾಲೂಕಿನ ವಿವಿಧ ಅಧಿಕಾರಿಗಳು ಹಾಜರಿದ್ದರು.

ವಿಸ್ಮಯ ನ್ಯೂಸ ವಿಲಾಸ ನಾಯಕ ಅಂಕೋಲಾ

Exit mobile version