ಅತಿಪುರಾತನ ದೇವಸ್ಥಾನದಲ್ಲಿ ಕಳ್ಳತನ: ಆಭರಣ ಕದ್ದ ಕಳ್ಳರು: ಕಾಣಿಕೆ ಡಬ್ಬಿಯನ್ನು ದೇವಾಲಯದ ಹೊರಕ್ಕೆ ಎಸೆದು ಹೋದರು

ಸಿದ್ದಾಪುರ: ಇತ್ತಿಚಿಗೆ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ‌ ಹೆಚ್ಚುತ್ತಿದ್ದು,‌ದೇವಾಲಯಗಳೇ ಕಳ್ಳರ ಪ್ರಮುಖ ಟಾರ್ಗೆಟ್ ಆಗಿದೆ. ತಾಲೂಕಿನ ತ್ಯಾಗಲಿ ಸಮೀಪದ ಶೀಗೇಹಳ್ಳಿಯ ಕಲ್ಲೇಶ್ವರ ದೇವಾಲಯದಲ್ಲಿ ರಾತ್ರಿ ಕಳ್ಳತನ ಮಾಡಿದ ಕಳ್ಳರು ಬೆಲೆ ಬಾಳು ಆಭರಣ‌ ಕದ್ದೊಯ್ದಿದ್ದಾರೆ. ಅಲ್ಲದೆ, ದೇವಾಲಯದ ಕಾಣಿಕೆ ಡಬ್ಬಿಯಲ್ಲಿನ ಹಣವನ್ನು ದೋಚಿರುವ ದುಷ್ಕರ್ಮಿಗಳು, ಕಾಣಿಕೆ ಡಬ್ಬಿಯನ್ನು ದೇವಾಲಯದ ಹೊರಕ್ಕೆ ಎಸೆದು ಹೋಗಿದ್ದಾರೆ.

ಈ ದೇವಸ್ಥಾನ ಅತಿ ಪುರಾತನ ಕಾಲದ ದೇವಸ್ಥಾನಗಳಲ್ಲಿ ಒಂದಾಗಿದ್ದು,‌ಅಪಾರ ಭಕ್ತ ವರ್ಗವನ್ನು ಹೊಂದಿದೆ. ಈ ಭಾಗದ ಸುತ್ತಮುತ್ತಲು ಇತ್ತೀಚಿಗೆ ಅಡಿಕೆ ಕಳ್ಳತನ ಕೂಡ ಆಗಿದೆ ಎಂಬ ಮಾಹಿತಿ ಸಿಕ್ಕಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಇದು ಮೂರನೇ ಕಳ್ಳತನದ ಪ್ರಕರಣವಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಕಾಣಿಕೆ ಡಬ್ಬ ಎಸೆದಿರುವುದು

ಹತ್ತಾರು ಕ್ಷೇತ್ರದಲ್ಲಿ ಇದೆ ಉದ್ಯೋಗಾವಕಾಶ .
ಗ್ಲೋಬಲ್ ಕನ್ಸಲ್ಟೆನ್ಸಿ ಸರ್ವೀಸಸ್, ಇಂಡಿಯಾ7TH, SSLC, PUC, DIPLOMA, ITI, D.ED, B.ED, ANY DEGREE, ANY PG, PH.D,ANY PROFESSIONAL COURSES ಆದವರು ಸಂಪರ್ಕಿಸಿ.ಖಾಸಗಿ, ರಾಜ್ಯ & ಕೇಂದ್ರ ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಇಂದೇ ಸಂಪರ್ಕಿಸಿ: 9880179177 ಪ್ರಧಾನ ಕಚೇರಿ ಶಿರಸಿ

ವಿಸ್ಮಯ ನ್ಯೂಸ್ ಸಿದ್ದಾಪುರ

Exit mobile version