ಸಿಎ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದ ರ‍್ಯಾಂಕ್: ಶಿರಸಿ ಯುವಕನ ಸಾಧನೆ: ತತ್ವಶಾಸ್ತ್ರದಲ್ಲಿ ಬಂಗಾರದ ಪದಕ ಪಡೆದ ಕಾಂಚನಾ ಸಿದ್ದಿ

ಜಿಲ್ಲೆಗೆ, ತಾಲೂಕಿಗೆ ಕೀರ್ತಿ ತಂದ ಯುವಕ
ಸಾಧಕ ಯುವಕನಿಗೆ ಅಭಿನಂದಿಸಿ, ಪ್ರೋತ್ಸಾಹಿಸಿ

ಶಿರಸಿ: ಐಸಿಎಐ ನಡೆಸುವ ಚಾರ್ಟರ್ಡ್ ಅಕೌಂಟೆನ್ಸಿಯ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ತಾಲೂಕಿನ ಗಣಪತಿ ರಮಾಕಾಂತ ಹೆಗಡೆ ರಾಷ್ಟ್ರಕ್ಕೆ 19 ನೇ ರ‍್ಯಾಂಕ್ ಗಳಿಸುವ ಮೂಲಕ ಜಿಲ್ಲೆಗೆ ಹಾಗು ಊರಿಗೆ ಕೀರ್ತಿ ತಂದಿದ್ದಾನೆ. ಈತ ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವಾನಳ್ಳಿಯಲ್ಲಿ, ಪ್ರೌಢ ಶಿಕ್ಷಣವನ್ನು ಶ್ರೀ ಶಾರದಾಂಬಾ ಪ್ರೌಢಶಾಲೆ, ಭೈರುಂಬೆಯಲ್ಲಿ ಓದಿದ್ದು, ಬಳಿಕ ದಕ್ಷಿಣ ಕನ್ನಡದ ಅಳಿಕೆಯಲ್ಲಿ ರಾಜ್ಯಮಟ್ಟದ ರ‍್ಯಾಂಕ್ ನೊಂದಿಗೆ ಪಿಯುಸಿಯನ್ನು ಮುಗಿಸಿ, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿಕಾಮ್ ಪದವಿ ಪಡೆದಿದ್ದಾನೆ.

ಈತ ತಾಲೂಕಿನ ವಾನಳ್ಳಿ ಸಮೀಪದ ಮಂಡೆಮನೆಯ ಜಯಾ ಮತ್ತು ರಮಾಕಾಂತ ಹೆಗಡೆ ದಂಪತಿಯ ಪುತ್ರನಾಗಿದ್ದಾನೆ. ಈತನ ಸಾಧನೆಯನ್ನು ಹಿತೈಷಿಗಳು, ಗುರುವೃಂದದವರು ಹಾಗು ಪಾಲಕರು ಶ್ಲಾಘಿಸಿ, ಶುಭಕೋರಿದ್ದಾರೆ. ನೀವು ಅಭಿನಿಂದಿಸಿ, ಸಾಧಕನ ಸಾಧನೆಯನ್ನು ಪ್ರೋತ್ಸಾಹಿಸಿ

ಸಾಧನೆ ಮಾಡಿದ ಯುವತಿ

ತತ್ವಶಾಸ್ತ್ರದಲ್ಲಿ ಕಾಂಚನಾ ಸಿದ್ದಿಗೆ ಬಂಗಾರದ ಪದಕ

ಯಲ್ಲಾಪುರ: ಬಡಕುಟುಂಬದಿoದ ಬಂದು, ಬಡತನದಲ್ಲಿ ಬೆಳೆದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ತಾಲೂಕಿನ ಕಾಂಚನಾ ಲಕ್ಷ್ಮಣ ಸಿದ್ದಿ ಎಮ್.ಎ ತತ್ವಶಾಸ್ತ್ರದಲ್ಲಿ ಸ್ವರ್ಣ ಪದಕ ಪಡೆದುಕೊಂಡಿದ್ದಾಳೆ. ಈಕೆಯ ಸಾಧನೆಯನ್ನು ಕುಟುಂಬದವರು, ಪೋಷಕರು, ಊರಿನವರು ಮುಕ್ತಕಂಠದಿoದ ಶ್ಲಾಘಿಸಿ ಮೆಚ್ಚುಗೆ ಸೂಚಿಸಿದ್ದಾರೆ.

ನಿಮ್ಮ ಜೀವನದ ತೊಂದರೆಗಳಾದ ಮಾಟ ಮಂತ್ರ, ಕೆಟ್ಟ ಚಾಳಿ, ಪ್ರೇಮ ಕಲಹ, ದಾಂಪತ್ಯ ಕಲಹ, ಕುಟುಂಬ ತೊಂದರೆ, ವ್ಯವಹಾರದ ತೊಂದರೆ, ಬೋಟಿನ ತೊಂದರೆ, ದೋಣಿಯ ತೊಂದರೆ,ಹಾಗೂ ಇತರೆ ತೊಂದರೆಗೆ ಪರಿಹಾರ ಮಾಡಿಕೊಡಲಾಗುವುದು. ಇದರಲ್ಲದೆ ಮನೆಗೆ ರಕ್ಷಣೆಯ ಕಾಯಿ, ಮಕ್ಕಳಿಗೆ ಯಂತ್ರ ಮಾಡಿಕೊಡಲಾಗುವುದು ಮತ್ತು ಬಾವಿಯ ಜಲ ತೋರಿಸುದು ,ಮನೆ ಕಟ್ಟಲು ಸೂಕ್ತ ವಾದ ಸ್ಥಳ ಗುರುತಿಸಿಕೊಡಲಾಗುವುದು ಹಾಗೂ ಮನೆಯಲ್ಲಿ ನಾಗ ಚೌಡಿ ಇತರೆ ಯಾವುದೇ ನಡೆಗಲು ಇದ್ದರೆ ತಪ್ಪಿಸಿಕೊಡಲಾಗುದು ಹಾಗೂ ನಿಮ್ಮ ಸಮಸ್ಯೆಗಳಿಗೆ ಪ್ರತಿ ಶನಿವಾರ ದೇವಿಯ ದರ್ಶನ ಬರುವುದರೊಂದಿಗೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡಲಾಗುವುದು. ಇಂದೇ ಸಂಪರ್ಕಿಸಿ: 7848019996, ಶ್ರೀ ಮಂಜುನಾಥ ಭವಿಷ್ಯ ಕೇಂದ್ರ, ದುರ್ಗಾ ಚಾಮುಂಡೇಶ್ವರಿ ನಾಗಮಾಸ್ತಿ ಆರಾಧಕ , ಅಶೋಕ ನಾಯ್ಕ ಜನತಾ ವಿದ್ಯಾಲಯ ಇದುರಿನ ರಸ್ತೆ ಗುಡ್ಡಹಿತ್ಲು ಶಿರಾಲಿ, ಭಟ್ಕಳ

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version