ಕಾಡು ಮೊಲ ಹಿಡಿದು ತಿನ್ನಲು ತಯಾರಿ ಮಾಡುತ್ತಿರುವಾಗಲೇ ದಾಳಿ; ಮೂವರು ಆರೋಪಿಗಳು ಅಂದರ್ !

ಕಾರವಾರ: ಬಲೆ ಹಾಕಿ ಹಿಡಿದಿದ್ದ ಕಾಡು ಮೊಲ‌ವನ್ನು ತಿನ್ನಲು ತಯಾರಿ ನಡೆಸುತ್ತಿರುವಾಗಳೇ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಜೊಯಿಡಾ ತಾಲ್ಲೂಕಿನ ಕ್ಯಾಸಲ್ ರಾಕ್ ಶಾಖೆಯ ಕಲಂಬುಳಿ ಬಳಿ ನಡೆದಿದೆ.

ಜೊಯಿಡಾ ತಾಲ್ಲೂಕಿನ ಅಮೃತಪಾಲಿಯ ಕೃಷ್ಣಾ ಲಕ್ಷ್ಮ ನಾಯ್ಕ, ತಮ್ಮಣ್ಣ ಸೋಮಾ ಮಿರಾಶಿ, ಸಂತೋಷ ಶಂಕರ್ ಮಿರಾಶಿ ಬಂಧಿತ ಆರೋಪಿಗಳು. ಫೆ. 4 ರಂದು ಕ್ಯಾಸಲ್ ರಾಕ್ ವನ್ಯ ಜೀವಿ ವಲಯದ ಕಲಂಬುಳಿ ಬಳಿ ಬೇಲಿ ಹಾಕಿ ಬೇಲಿಗೆ ತಂತಿಯ ನೇಣು ಬಿಗಿದಿದ್ದರು.‌ ಶುಕ್ರವಾರ ಬಲೆಗೆ ಕಾಡು ಮೊಲ ಬಿದ್ದಿದ್ದು ಆರೋಪಿಗಳು ಬೆಳಿಗ್ಗೆ ಮೊಲವನ್ನು ಅಲ್ಲೆ ಹತ್ತಿರದ ನಾಲಾಕ್ಕೆ ಕೊಂಡೊಯ್ದು ತಿನ್ನಲು ತಯಾರಿ ಮಾಡಿಕೊಂಡಿದ್ದರು.

ಆದರೆ ಇದೇ ವೇಳೆಗೆ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಗಮನಿಸಿದ್ದು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ದಾಂಡೇಲಿ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಕ್ಯಾಸಲ್ ರಾಕ್ ವಲಯ ಅರಣ್ಯಾಧಿಕಾರಿ ಎಂ.ಎಸ್ ಕಳ್ಳಿಮಠ, ಉಪ ವಲಯ ಅರಣ್ಯಾಧಿಕಾರಿ ಸತೀಶ ಎಸ್, ಅರಣ್ಯ ರಕ್ಷಕ ಲಿಂಗರಾಜ್ ಗೌಡ ಪಾಲ್ಗೊಂಡಿದ್ದರು.

” ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777,,,, INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777

ವಿಸ್ಮಯ ನ್ಯೂಸ್ ಜೋಯ್ಡಾ

Exit mobile version