ವಾಹನ ಬಡಿದು ಹೆಣ್ಣು ಚಿರತೆ ಸಾವು ; ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ ಅರಣ್ಯಾಧಿಕಾರಿಗಳ ತಂಡ

ಅಂಕೋಲಾ : ರಾ.ಹೆ.63 ಮಾಸ್ತಿಕಟ್ಟೆ-ಹೊನ್ನಳ್ಳಿ ಬಳಿ ಶುಕ್ರವಾರ ಸಂಜೆ ಅಪರಿಚಿತ ವಾಹನ ಬಡಿದ ಪರಿ ಣಾಮ ಚಿರತೆಯೊಂದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ಅಂದಾಜು 8 ವರ್ಷದ ಈ ಹೆಣ್ಣು ಚಿರತೆ ಹೆದ್ದಾರಿಯ ಒಂದು ಮಗ್ಗಲುವಿನಿಂದ ಇನ್ನೊಂದು ಮಗ್ಗಲಿಗೆ ರಸ್ತೆ ದಾಟುತ್ತಿರುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಅಪರಿಚಿತ ವಾಹನ ಜೋರಾಗಿ ಡಿಕ್ಕಿ ಹೊಡೆದ ಪರಿಣಾಮ ಚಿರತೆಯ ಸೊಂಟದ ಭಾಗಕ್ಕೆ ತೀವೃ ಗಾಯವಾಗಿದ್ದಲ್ಲದೆ ದೇಹದ ಇತರೇ ಭಾಗಗಳಿಗೂ ಗಂಭೀರ ಪೆಟ್ಟು ಬಿದ್ದು, ರಕ್ತ ಸ್ರಾವದಿಂದ ಚಿರತೆ ಸಾವನ್ನಪ್ಪಿದೆ.

ಎಸಿಎಫ್ ಮಂಜುನಾಥ ನಾವೆ, ಮಾಸ್ತಿಕಟ್ಟಾ ಆರ್‍ಎಫ್‍ಓ ರಾಘವೇಂದ್ರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಕಾರವಾರ ಉಪ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕೆ. ಮಾರ್ಗದರ್ಶನದಲ್ಲಿ ಅರಣ್ಯ ಇಲಾ ಖೆ ಅಧಿಕಾರಿಗಳ ತಂಡ ತನಿಖೆ ಮುಂದುವರಿಸಿದೆ ಹಿಲ್ಲೂರು ಪಶುವೈಧ್ಯಾಧಿಕಾರಿ ಡಾ. ಚಂದನ್ ಮರಣೋತ್ತರ ಪರೀಕ್ಷೆ ನಡೆಸಲಿದ್ದು, ನಂತರ ಮೃತ ಚಿರತೆಯ ಕಳೇ ಬರವನ್ನು ಸುಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

” ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777,,,, INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version