Follow Us On

WhatsApp Group
Info
Trending

ಅಂಕೋಲಾ ಗ್ರಾಪಂ.ಗಳ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಮೂಹೂರ್ತ ಪಿಕ್ಸ್ : 3 ದಿನಗಳಲ್ಲಿ ನಡೆಯಲಿದೆ 21 ಗ್ರಾಪಂ.ಗಳ ಪ್ರಥಮ-ದ್ವಿತೀಯ ಪ್ರಜೆಗಳ ಆಯ್ಕೆ

ಅಂಕೋಲಾ : ಜ.30 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಲೂಕಿನ ವಿವಿಧ ಗ್ರಾಪಂ.ಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗಧಿ ಪಡಿಸಲಾಗಿತ್ತು. ಅದೇ ಮೀಸಲಾತಿಯನ್ವಯ ತಾಲೂಕಿನ ಎಲ್ಲ 21 ಗ್ರಾಪಂ.ಗಳ ಪ್ರಥಮ ಮತ್ತು ದ್ವಿತೀಯ ಪ್ರಜೆಗಳ ಆಯ್ಕೆಗೆ ಸಂಬಂಧಿಸಿದಂತೆ ಚುನಾವಣಾ ದಿನಾಂಕ ಗೊತ್ತುಪಡಿಸಲಾಗಿದ್ದು, ಫೆ.9,10,11 ಸೇರಿದಂತೆ 3 ದಿನಗಳಲ್ಲಿ ವಿವಿಧ ಗ್ರಾಪಂ.ಗಳ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಗೆ ಕುಮಟಾ ಉಪವಿಭಾಗಾಧಿಕಾರಿ ಎಂ.ಅಜಿತ ರೈ ಮಾರ್ಗದರ್ಶನದಲ್ಲಿ, ತಹಸೀಲ್ದಾರ್ ಉದಯ ಕುಂಬಾರ ಮತ್ತು ಸಿಬ್ಬಂದಿಗಳು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ಫೆ.09 :ಸುಂಕಸಾಳ, ಅಗಸೂರು, ಸಗಡಗೇರಿ, ಶೆಟಗೇರಿ, ವಂದಿಗೆ, ಫೆ.10 :ಹಿಲ್ಲೂರು, ಡೋಂಗ್ರಿ, ಅವರ್ಸಾ, ಮೊಗಟಾ, ಬೆಳಂಬಾರ, ಅಲಗೇರಿ, ಬೇಲೇಕೇರಿ,
ಫೆ.11:ಹಾರವಾಡ, ಅಚವೆ, ಬೆಳಸೆ, ಅಗ್ರಗ್ರೋಣ, ಭಾವಿಕೇರಿ, ವಾಸರಕುದ್ರಿಗೆ, ಹೊನ್ನೆಬೈಲ್, ಬೊಬ್ರುವಾಡ, ಹಟ್ಟಿಕೇರಿ, ಗ್ರಾಪಂ.ಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗಧಿಯಾಗಿದ್ದು, ಹಳ್ಳಿ ಪೈಟ್‍ನ ಅಂತಿಮ ಗದ್ದುಗೆ ಏರಲು ನಾನಾ ರೀತಿಯ ರಾಜಕೀಯ ಕಸರತ್ತು ಶುರುವಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button