ಸಹೋದರಿಯನ್ನೇ ಗರ್ಭಿಣಿಯನ್ನಾಗಿಸಿದ : ತಾಯಿ ಇಲ್ಲದ 12 ವರ್ಷದ ಅಪ್ರಾಪ್ತೆ ಈಗ ಎಂಟು ತಿಂಗಳ ಗರ್ಭಿಣಿ

ಪ್ರಕರಣ ದಾಖಲಿಸಿದ ಪೊಲೀಸರು
ಚಿಕ್ಕಪ್ಪನ ಮಗಳನ್ನೇ ಗರ್ಭಿಣಿ ಮಾಡಿದ

ಗೋಕರ್ಣ: ಇತ್ತಿಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚುತ್ತಿದೆ. ಅದರಲ್ಲೂ ಅಣ್ಣ-ತಂಗಿ ಸಂಬಂಧಕ್ಕೂ ಕಪ್ಪುಚುಕ್ಕೆ ತರುವಂತ ಘಟನೆಗಳು ನಡೆಯುತ್ತಿರುವುದು ಆಘಾತಕಾರಿ ಬೆಳವಣಿಗೆಯೇ ಸರಿ. ಈತನ ಕ್ರೌರ್ಯಕ್ಕೆ ಅಪ್ರಾಪ್ತೆ ಬಾಲಕಿಯೊಬ್ಬಳು ಪರಿತಪಿಸುವಂತಾಗಿದೆ. ಆಕೆ ಇನ್ನೂ 12 ವರ್ಷದ ಬಾಲಕಿ. ಅಲ್ಲದೆ, ತನ್ನ ಚಿಕ್ಕಪ್ಪನ ಮಗಳು. ಈ ಅಪ್ರಾಪ್ತೆಯನ್ನು ದಾರಿತಪ್ಪಿಸಿ, ಯುವಕನೊಬ್ಬ ಅತ್ಯಾಚಾರ ಮಾಡಿದ್ದಾನೆ. ಹೌದು, ಯುಕನನೊಬ್ಬ ತನ್ನ ಚಿಕ್ಕಪ್ಪನ ಮಗಳನ್ನೇ ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಮೂಡಂಗಿಯಲ್ಲಿ ನಡೆದಿದೆ.

ಗೋಕರ್ಣದ ಮೂಡಂಗಿಯ 12 ವರ್ಷದ ಬಾಲಕಿಗೆ ತಾಯಿ ಇರಲಿಲ್ಲ. ಈ ಬಾಲಕಿಯ ತಂದೆಗೆ ಪ್ರತಿದಿನ ಕೂಲಿಗೆ ತೆರಳುತ್ತಿದ್ದರು. ಕೂಲಿ ಕೆಲಸವೇ ಜೀವನಾಧಾರ ಆಗಿರುವುದರಿಂದ ಬೆಳಿಗ್ಗೆ ಮನೆಯಿಂದ ಹೊರಟರೆ, ಬರುವುದು ಸಂಜೆಯೇ. ಪ್ರತಿದಿನ ಕೂಲಿಗೆ ತೆರಳುವ ತಂದೆ, ಮಗಳನ್ನು ಅವಳ ದೊಡ್ಡಪ್ಪನ ಮನೆಯಲ್ಲಿ ಬಿಟ್ಟು ತೆರಳುತ್ತಿದ್ದ. ಅಲ್ಲಿ ದೊಡ್ಡಪ್ಪನ ಮನೆಯಲ್ಲೂ ಯಾರೂ ಇರುತ್ತಿರಲಿಲ್ಲ. ಅವರೆಲ್ಲರೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಇದನ್ನೇ ಯುವಕ ಬಳಸಿಕೊಂಡಿದ್ದಾನೆ. ತನ್ನ ಚಿಕ್ಕಪ್ಪನ ಮಗಳು ಎನ್ನುವುದುನ್ನೂ ನೋಡದೇ ಅತ್ಯಾಚಾರ ಮಾಡಿ ಅಪ್ರಾಯ್ತೆಯನ್ನು ಗರ್ಭಿಣಿ ಮಾಡಿದ್ದಾನೆ.

ಎಂಟು ತಿಂಗಳ ಗರ್ಭಿಣಿಯಾಗಿರುವ ಅಪ್ರಾಪ್ತೆ ಈಗ ಸಾಂತ್ವನ ಕೇಂದ್ರದಲ್ಲಿದ್ದಾಳೆ. ವಿಷಯ ತಿಳಿದ ಯುವಕ ಪ್ರಕರಣವನ್ನು ಮುಚ್ಚಿಡುವ ಪ್ರಯತ್ನ ಮಾಡಿದ್ದಾನೆ. ಅಲ್ಲದೆ, ಬೇರೊಂದು ಮದುವೆಯಾಗಿದ್ದಾನೆ ಎನ್ನಲಾಗಿದೆ. ಈಗ ಮಾಡಿದ ತಪ್ಪಿನಿಂದ ಈಗ ಯುವತಿ ಪರಿತಪಿಸುವಂತಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ.

” ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777,,,, INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,   ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777

ವಿಸ್ಮಯ ನ್ಯೂಸ್, ಗೋಕರ್ಣ

Exit mobile version