ಸ್ನಾನದ ಮನೆಗೆ ಹೋದವಳು ಮರಳಿ ಬರಲೇ ಇಲ್ಲ
ಮನೆಯವರಲ್ಲಿ ನೀರವ ಮೌನ
ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವು
ಕಾರವಾರ: ಈಕೆ ಮುದ್ದಾದ ಹುಡುಗಿ. ಪ್ರತಿಭಾನ್ವಿತೆ ಕೂಡಾ. ನನ್ನ ನೃತ್ಯದಿಂದ, ಮಾತಿನ ಕೌಶಲ್ಯದಿಂದ ಜನಮನ ಗೆದ್ದಿದ್ದಳು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಸ್ನಾನದ ಮನೆಗೆ ಹೋದವಳು ಮರಳಿ ಬರಲೇ ಇಲ್ಲ. ಕುಟುಂಬದವರಲ್ಲಿ, ಮನೆಯವರಲ್ಲಿ ನೀರವ ಮೌನ ಆವರಿಸಿದೆ. ಹೌದು, ಸ್ನಾನದ ಕೋಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದ ಬಾಲಕಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಕಾರವಾರ ತಾಲೂಕಿನ ಕುರ್ನಿಪೇಟದಲ್ಲಿ ನಡೆದಿದೆ.
ಮಲ್ಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರ್ನಿಪೇಟದ ನಿವಾಸಿ 11 ವರ್ಷದ ಗಗನಾ ನಾಯ್ಕ ಮೃತಪಟ್ಟ ಬಾಲಕಿ. ಮಲ್ಲಾಪುರದ ಕೇಂದ್ರೀಯ ವಿದ್ಯಾಲಯದಲ್ಲಿ 6 ನೇ ತರಗತಿ ಕಲಿಯುತ್ತಿದ್ದಳು. ಎರಡು ದಿನಗಳ ಹಿಂದೆ ಈಕೆಯು ತನ್ನ ಮನೆಯಲ್ಲಿ ಸ್ನಾನಗೃಹಕ್ಕೆ ತೆರಳಿದ್ದ ವೇಳೆ ಈಕೆಯ ಬಟ್ಟೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಪೂರ್ತಿ ದೇಹ ಸುಟ್ಟಿತ್ತು. ವಿಷಯ ತಿಳಿದ ಕುಟುಂಬಸ್ಥರು ಬೆಂಕಿ ಆರಿಸಿವುದರೊಳಗಾಗಿ 80 ಪ್ರತಿಶತ ಸುಟ್ಟಗಾಯಗಳಾಗಿದ್ದವು.
ತಕ್ಷಣ ಬಾಲಕಿಯನ್ನು ಕಾರವಾರದ ಕಿಮ್ಸ್ ಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಬಾಲಕಿಯು ಇಂದು ಅಸುನೀಗಿದ್ದಾಳೆ.
ಓದುವುದರಲ್ಲಿ ಹಾಗೂ ಅಭಿನಯ ಸೇರಿದಂತೆ ಇತರ ಚಟುವಟಿಕೆಗಳಲ್ಲಿ ಚುರುಕಾಗಿದ್ದ ಬಾಲಕಿ ಮಲ್ಲಾಪುರ ಭಾಗದಲ್ಲಿ ಎಲ್ಲರ ಗಮನ ಸೆಳೆದಿದ್ದಳು. ಆದರೆ ಇದೀಗ ಈಕೆಯ ಸಾವಿನ ಸುದ್ದಿ ತಿಳಿದ ಗ್ರಾಮಸ್ಥರು ತೀವ್ರ ಶೋಕ ವ್ಯಕ್ತ ಪಡಿಸುತ್ತಿದ್ದಾರೆ. ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಂಚ ಪಡೆದ ಹಣದಲ್ಲಿ ಇನ್ನೂರು ರೂಪಾಯಿ ಡಿಸ್ಕೌಂಟ್! ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಈ ಲಂಚಬಾಕನ ಆಫರ್ ಹೇಗಿದೆ ನೋಡಿ?ಸೂಪರ್ ಮಾರ್ಕೆಟ್‌ನಲ್ಲೂ ಇಂಥ ಆಫರ್ ಕೊಡಲ್ಲ ನೋಡಿ!
ಕಾರವಾರ: ಸಂಘದ ನೊಂದಣಿ ಮಾಡಲು 1,500 ರೂ ಹಣ ಪಡೆಯುವಾಗ ಅಧಿಕಾರಿಯೋರ್ವರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿರುವ ಘಟನೆ ಕಾರವಾರದ ಸಹಕಾರಿ ಸಂಘಗಳ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನಡೆದಿದೆ. ಸಹಕಾರಿ ಸಂಘಗಳ ಹಿರಿಯ ನಿಬಂಧಕ ಭಾಸ್ಕರ್ ನಾಯ್ಕ ಎಸಿಬಿ ಬಲೆಗೆ ಬಿದ್ದ ಅಧಿಕಾರಿ.
ಹಣಕೋಣದ ಸುನೀಲ್ ನಾಯ್ಕ ಎಂಬುವವರು ಶ್ರೀ ಸಾತೇರಿ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಯುತ್ ಕ್ಲಬ್ ಹಣಕೋಣ ಸಂಘದ ನೋಂದಣಿಗೆ ತೆರಳಿದ್ದರು. ಆದರೆ ಸಂಘದ ನೋಂದಣಿಗಾಗಿ ಅಧಿಕಾರಿ 3 ಸಾವಿರ ರೂ ಬೇಡಿಕೆ ಇಟ್ಟಿದ್ದ. ಕೊನೆಗೆ 1500 ರೂ ಕೊಡುವುದಾಗಿ ಮಾತುಕತೆ ನಡೆಸಿದ್ದರು. ಈ ಬಗ್ಗೆ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದ. ಅದರಂತೆ ಕಾರ್ಯಾಚರಣೆಗೆ ಪ್ಲ್ಯಾನ್ ರೂಪಿಸಿದ್ದ ಎಸಿಬಿ ಡಿವೈಎಸ್ಪಿ ಮಂಜುನಾಥ ಕೌರಿ ಅವರ ತಂಡ ಇಂದು ಒಂದೂವರೆ ಸಾವಿರ ಲಂಚ ಹಣ ನೀಡುವಾಗ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಕಾರವಾರ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಟ್ಕಳದ ನಿವಾಸಿಯಾಗಿರುವ ಈ ಲಂಚಬಾಕ ಅಧಿಕಾರಿ ಲಂಚದ ಹಣ ದಲ್ಲೂ ಡಿಸ್ಕೌಂಟ್ ನೀಡಿದ್ದಾನೆ. ಮೊದಲು ನೊಂದಣಿ ಶುಲ್ಕ ಸೇರಿ ಮೂರುಸಾವಿರ ಹಣ ಲಂಚ ಕೇಳಿದ್ದರಂತೆ. ಮೊದಲು ಶುಲ್ಕದ ಮೊತ್ತ ಒಂದೂವರೆ ಸಾವಿರ ನೀಡಲಾಗಿತ್ತು. ನಂತರ ಲಂಚದ ಮೊತ್ತದ ಮೊದಲ ಕಂತಿನ ಒಂದೂವರೆ ಸಾವಿರ ರೂ. ನನ್ನು ನೀಡಲಾಗಿತ್ತು. ಈ ವೇಳೆ ಇನ್ನೂರು ರೂಪಾಯಿಯನ್ನು ಲಂಚದ ಹಣದಲ್ಲಿ ಮರಳಿಸಿ ಕಡಿಮೆ ತೆಗೆದುಕೊಂಡಿರುವುದಾಗಿ ದೂರುದಾರರಿಗೆ ಹೇಳಿದ್ದನಂತೆ!
ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888
ವಿಸ್ಮಯ ನ್ಯೂಸ್ ಕಾರವಾರ