ಶ್ರೀಲತಾ ಅರಮನೆಗೆ ಗೌರವ ಡಾಕ್ಟರೇಟ್ : ಯುನಿರ್ವಸಿಟಿ ಆಫ್ ಸೆಂಟ್ರಲ್ ಅಮೇರಿಕಾದ ಪುರಸ್ಕಾರ

ಅಂಕೋಲಾ : ಯುನಿರ್ವಸಿಟಿ ಆಫ್ ಸೆಂಟ್ರಲ್ ಅಮೇರಿಕಾದ, ಡಾ.ರಾಧಾಕೃಷ್ಣನ್ ಟೀಚರ್ಸ್ ವೆಲ್‍ಫೆರ್ ಅಸೋಸಿಯೇಶನ್ ಇಂಡಿಯಾ ಇವರು ಲತಾ ಆರ್.ನಾಯಕ ಇವರಿಗೆ ಗೌರವ ಡಾಕ್ಟರೇಟ್ ನೀಡಿ ಪುರ ಸ್ಕರಿಸಲಿದ್ದಾರೆ.

ಎತ್ತರಕ್ಕೆ ಏರುತ್ತಿರುವ ಕೀರ್ತಿ : ದಿ.ಆರ್.ಎನ್.ನಾಯಕ ಅವರು ಕಟ್ಟಿ ಬೆಳೆಸಿದ ಹಿಮಾಲಯ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷೆಯಾಗಿರುವ ಲತಾ ನಾಯಕ, ತನ್ನ ಮಗ ಮಯೂರ ನಾಯಕ ಹಾಗೂ ಇತರೇ ಸಿಬ್ಬಂದಿ ಗಳ ಸಹಕಾರದಲ್ಲಿ ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಉನ್ನತಿಗೆ ಮಹತ್ತರ ಕೊಡುಗೆ ನೀಡುತ್ತಿದ್ದಾರೆ.

ಹಿರಿಯ ಕವಿಯತ್ರಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದು, ಇವರೇ ಅಧ್ಯಕ್ಷರಾಗಿರುವ ಜಯಲಕ್ಷ್ಮೀ ಮಹಿಳಾ ಸಹಕಾರಿ ಬ್ಯಾಂಕ್ ರಾಜ್ಯದ ಉತ್ತಮ ಸಹಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹತ್ತಾರು ಸಂಘಟನೆ, ವಿದಾಯಕ ಚಟುವಟಿ ಕೆಗಳ ಮೂಲಕ ಸಕ್ರೀಯವಾಗಿರುವ ಲತಾ ನಾಯಕ ಇವರು ಶೈಕ್ಷಣಿಕ, ಸಾಮಾಜಿಕ ಮತ್ತಿತರ ರಂಗಗಳಲ್ಲಿ ನೀಡಿದ ಕೊಡುಗೆಯನ್ನು ಗಮನಿಸಿ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಲಾಗುತ್ತಿದೆ.

ಶ್ರೀಲತಾ ಈಗ ಡಾ.ಲತಾ : ಶ್ರೀಲತಾ ಅರಮನೆಯವರು ಡಾ. ಲತಾ ನಾಯಕ ಆಗಿ ಗೌರವ ಪುರಸ್ಕಾರ ಪಡೆಯುತ್ತಿರುವುದಕ್ಕೆ ಅವರ ಕುಟುಂಬದ ಹಿತೈಷಿಗಳು, ಒಡನಾಡಿಗಳು ಮತ್ತು ಆಪ್ತರು ಹರ್ಷ ವ್ಯಕ್ತಪಡಿ ಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version