ಗ್ರಾಹಕರ ಸೋಗಿನಲ್ಲಿ ಬಂದು ಬಂಗಾರದ ಖರೀದಿಸುವ ನೆಪಮಾಡಿ ಮೋಸ: ಕೈಚಳಕ ತೋರಿಸಿ 4 ಲಕ್ಷ ಮೌಲ್ಯದ ಚಿನ್ನಕದ್ದರು

ಅಂಕೋಲಾ: ಆ ಇಬ್ಬರು ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಒಡವೆ ಖರೀದಿಸಲು ಬಂದಿದ್ದರು. ಆದರೆ, ಒಡವೆ ಖರೀದಿಸುವ ನೆಪಮಾಡಿಕೊಂಡು ಬಂದು ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಒಡವೆಗಳನ್ನು ಕಳುವು ಮಾಡಿದ್ದಾರೆ. ಈ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ಬಂಗಾರದ ಅಂಗಡಿಯೊಂದರಲ್ಲಿ ನಡೆದಿದೆ. ಪಟ್ಟಣದ ಅಲಂಕಾರ ಜ್ಯುವೆಲರ್ಸ್ ಎಂಬ ಅಂಗಡಿಗೆ ಮಾರ್ಚ್ 3 ರಂದು ಇಬ್ಬರು ಅಪರಿಚಿತ ವ್ಯಕ್ತಿಗಳು ಮುಖಕ್ಕೆ ಮಾಸ್ಕ್ ಧರಿಸಿ ಬಂದಿದ್ದರು. ಅಂಗಡಿ ಮಾಲೀಕರಿಂದ ಬಂಗಾರದ ದರದ ಮಾಹಿತಿ ಪಡೆದು ಬಂಗಾರದ ಹರಳಿನ ಸ್ಟಡ್, ಕಿವಿಯೋಲೆ ಮತ್ತು ಬಳೆಗಳನ್ನುತೋರಿಸುವಂತೆ ಕೇಳಿದ್ದಾರೆ.

ಅಂಗಡಿ ಮಾಲೀಕ ಇವರಿಗೆ ಒಡವೆಗಳನ್ನು ತೋರಿಸುವ ವೇಳೆ ಮಾಲೀಕನಿಗೆ ಅರಿವಿಗೆ ಬಾರದಂತೆ ಸುಮಾರು 95 ಗ್ರಾಂ ತೂಕದ ವಿವಿಧ ಬಂಗಾರದ ಆಭರಣಗಳನ್ನು ಕಳುವು ಮಾಡಿದ್ದಾರೆ . ಈ ವಿಷಯ ಮಾರ್ಚ್ 10ರಂದು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡುವ ವೇಳೆ ಅಂಗಡಿ ಮಾಲೀಕನ ಗಮನಕ್ಕೆ ಬಂದಿದೆ. ಈ ಸಂಬoಧ ಅಂಗಡಿ ಮಾಲೀಕರಾದ ಗಣಪಯ್ಯ ಕುಡಾಳಕರ್ ಅವರು ಅಂಕೋಲಾ ಪೋಲೀಸರಿಗೆ ದೂರು ನೀಡಿದ್ದಾರೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

ವಿಸ್ಮಯ ನ್ಯೂಸ್, ಅಂಕೋಲಾ

Exit mobile version