ಶಿವರಾತ್ರಿಯಂದು ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಆರು ಮಂದಿಯನ್ನು ರಕ್ಷಿಸಲಾಗಿತ್ತು. ಇಂದು ಮತ್ತಿಬ್ಬರನ್ನು ರಕ್ಷಿಸಲಾಗಿದೆ.ಕಡಲತೀರಕ್ಕೆ ಬರುವ ಪ್ರವಾಸಿಗರು ಈಜಲು ತೆರಳಬಾರದು ಎಂದು ಎಷ್ಟೆ ಹೇಳಿದ್ರೂ ಕೇಳದೆ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.
ಗೋಕರ್ಣ: ಇತ್ತಿಚೆಗೆ ಗೋಕರ್ಣಕ್ಕೆ ಬರುವ ಪ್ರವಾಸಿಗರು ಸಮುದ್ರಕ್ಕೆ ಮೋಜಿನಾಟಕ್ಕೆ ಇಳಿದು ಅಪಾಯಕ್ಕೆ ಸಿಲುಕುತ್ತಿರುವ ಪ್ರಕಣ ಹೆಚ್ಚುತ್ತಿದೆ. ಶಿವರಾತ್ರಿಯಂದು ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಆರು ಮಂದಿಯನ್ನು ರಕ್ಷಿಸಲಾಗಿತ್ತು. ಇದೀಗ ಮತ್ತೆ ಇಂತಹದೇ ಪ್ರಕರಣ ವರದಿಯಾಗಿದೆ.
ಹೌದು ಸಮುದ್ರ ದಲ್ಲಿ ಈಜಲು ತೆರಳಿದ ವೇಳೆ ಸುಳಿಗೆ ಸಿಕ್ಕಿ ಸಮುದ್ರ ಪಾಲಾಗುತ್ತಿದ್ದ ಇಬ್ಬರ ರಕ್ಷಣೆ ಮಾಡಿದ ಘಟನೆ ಗೋಕರ್ಣದ ಮುಖ್ಯ ಕಡಲತೀರದಲ್ಲಿ ನಡೆದಿದೆ. ಕೊಪ್ಪಳದಿಂದ 15 ಜನರ ತಂಡ ಪ್ರವಾಸಕ್ಕೆ ಬಂದಿದ್ದು, ಇಲ್ಲಿನ ಮುಖ್ಯ ಕಡಲತೀರದಲ್ಲಿ ಈಜುವಾಗ ಸುಳಿಗೆ ಇಬ್ಬರು ಸಿಲುಕಿದ್ದರು. ಈ ವೇಳೆ ಲೈಪ್ ಗಾರ್ಡ್ ಗಳಾದ ವಿಶ್ವಾಸ್ ಭಟ್,ರಾಜು ಅಂಬಿಗ , ಮಾರುತಿ, ,ಪ್ರವಾಸಿ ಮಿತ್ರ ಗಾರ್ಡ ಶೇಕರ್ ಹರಿಕಾಂತ್ ರವರು ರಕ್ಷಣೆ ಮಾಡಿದ್ದಾರೆ.
ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಕೊಪ್ಪಳ ಜಿಲ್ಲೆಯ ಪ್ರದೀಪ್ ವಿಜಯ ಪ್ರಸಾದ್ (19),ಕಿರಣ್ ವಿಜಯಪ್ರಸಾದ್ (20) , ಅವರನ್ನು ರಕ್ಷಿಸಲಾಗಿದೆ. ಗೋಕರ್ಣದ ಕಡಲತೀರಕ್ಕೆ ಬರುವ ಪ್ರವಾಸಿಗರು ಈಜಲು ತೆರಳಬಾರದು ಎಂದು ಎಷ್ಟೆ ಹೇಳಿದ್ರೂ ಕೇಳದೆ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.
ಈ ಸಂಬಂಧ ಗೋಕರ್ಣ ಠಾಣಾ ಪ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಸ್ಮಯ ನ್ಯೂಸ್ ಗೋಕರ್ಣ