ಅಂಕೋಲಾ ನಾಡವರ ಸಂಘದ ಅಧ್ಯಕ್ಷರಾಗಿ ಆರ್.ಟಿ.ಮಿರಾಶಿ| ಉಪಾಧ್ಯಕ್ಷರಾಗಿ ಮಯೂರ ನಾಯಕ, ಕಾರ್ಯದರ್ಶಿಯಾಗಿ ಮಂಜೇಶ್ವರ ನಾಯಕ

ಅಂಕೋಲಾ : ತಾಲೂಕಿನ ಪ್ರತಿಷ್ಠಿತ ಸಮುದಾಯ ಸಂಘಗಳಲ್ಲಿ ಒಂದಾಗಿರುವ ನಾಡವರ ಸಂಘದ 2021-24 ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಸಂಘದ ಅಧ್ಯಕ್ಷರಾಗಿ ಜಿಪಂ. ಮಾಜಿ ಸದಸ್ಯ, ಕೆಇಬಿಯ ನಿವೃತ್ತ ಎಇಇ ಆರ್.ಟಿ.ಮಿರಾಶಿ, ಉಪಾಧ್ಯಕ್ಷರಾಗಿ ದ್ವಾರಕ ಸಹಕಾರಿ ಅಧ್ಯಕ್ಷ ಮಯೂರ ಆರ್.ನಾಯಕ, ಕಾರ್ಯದರ್ಶಿಯಾಗಿ ಯುವ ಉದ್ದಿಮೆದಾರ ಮಂಜೇಶ್ವರ ಎಂ.ನಾಯಕ ಬೇಲೆಕೇರಿ ಆಯ್ಕೆಯಾಗಿದ್ದಾರೆ.

ಸಹಕಾರ್ಯದರ್ಶಿಯಾಗಿ ಹೆಸರಾಂತ ಉದ್ದಿಮೆದಾರ ವಿ.ಎನ್.ನಾಯಕ, ಪದಾಧಿಕಾರಿಗಳಾಗಿ ವಕೀಲ ಅನಂತ ತಲಗೇರಿ, ವಿನೋದ ನಾಯಕ ಬಾಸಗೊಡ, ವಿಠ್ಠಲ ಗಾಂವಕರ, ಡಾ. ಸಂಜು ನಾಯಕ, ರಾಮದಾಸ ನಾಯಕ ಹಿಚ್ಕಡ, ಮಂಜುನಾಥ ನಾಯಕ ಭಾವಿಕೇರಿ, ಉದಯ ನಾಯಕ ಭಾವಿಕೇರಿ, ಕೆ.ಆರ್.ನಾಯಕ ಬೇಲೇಕೇರಿ, ಜೈರಾಮ ನಾಯಕ ಲಕ್ಷ್ಮೇಶ್ವರ, ಗೋಪು ನಾಯಕ ಅಡ್ಲೂರು, ಗೋಪಾಲಕೃಷ್ಣ ನಾಯಕ, ಲಕ್ಷ್ಮೇಶ್ವರ, ಬೀರಣ್ಣ ನಾಯಕ ಜಿ.ಎಂ.ನಾಯಕ, ಸಾಯಿ ಗಾಂವಕರ ತೊರ್ಕೆ ಅವರನ್ನೊಳಗೊಂಡು 18 ಸದಸ್ಯರು ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿದ್ದಾರೆ.

ನಮ್ಮ ಸಮಾಜದ ಬಾಂಧವರು ನನ್ನನ್ನು 2021-24ನೇ ಸಾಲಿಗೆ ಅಧ್ಯಕ್ಷನನ್ನಾಗಿ ಆಯ್ಕೆಗೊಳಿಸಿದಕ್ಕೆ ತುಂಬು ಹೃದಯದ ಕೃತಜ್ಞತೆಯನ್ನು ಅರ್ಪಿಸುತ್ತೇನೆ. 2019-20ನೇ ಸಾಲಿನ ಪ್ರತಿಭಾ ಪುರಸ್ಕಾರ ಮತ್ತು ಇತರೇ ಕಾರ್ಯಕ್ರಮಗಳನ್ನು ಕೋವಿಡ್ ಹಿನ್ನಲೆಯಲ್ಲಿ ನಡೆಸಲು ಸಾಧ್ಯವಾಗಿರಲಿಲ್ಲಾ. ಪ್ರತಿಭಾ ಪುರಸ್ಕಾರವನ್ನು ಈ ಸಾಲಿನಲ್ಲಿ ಹಮ್ಮಿಕೊಳ್ಳಲು ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇವೆ. ಮತ್ತು ಸಂಘದ ಈ ಹಿಂದಿನ ವಿಧಾ ಯಕ ಇತರೇ ಚಟುವಟಿಕೆಗಳೊಂದಿಗೆ, ನೂತನ ಸಮಿತಿಯ ಸಲಹೆ ಮತ್ತು ಸಹಕಾರದಲ್ಲಿ ಜನಪರ ಕಾರ್ಯ ಕೈಗೊಳ್ಳಲು ಪ್ರಯತ್ನಿಸುತ್ತೇನೆ.- ಆರ್.ಟಿ.ಮಿರಾಶಿ ನೂತನ ಅಧ್ಯಕ್ಷರು ನಾಡವರ ಸಂಘ ಗಾಂಧಿನಿವಾಸ ಅಂಕೋಲಾ

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ಕಟೀಲು ದುರ್ಗಾಪರಮೇಶ್ವರಿ  ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್  ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

Exit mobile version