ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವತಿಗೆ 57 ಲಕ್ಷ ಪಂಗನಾಮ: ಖತರ್ನಾಕ್ ತಂಡವನ್ನು ಬಂಧಿಸಿದ ಪೊಲೀಸರು

ಯುವತಿಯೋರ್ವಳನ್ನು ಈ ಮೇಲ್ ಮೂಲಕ ಸಂಪರ್ಕಿಸಿದ ತಂಡವೊಂದು ಅಮೇರಿಕಾದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿತ್ತು. ಬಳಿಕ ಆಕೆಯಿಂದ ಹಂತಹಂತವಾಗಿ ಬರೊಬ್ಬರಿ 57 ಲಕ್ಷ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿತ್ತು.

ಕಾರವಾರ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರನ್ನು ನಂಬಿಸಿ ಅವರಿಂದ ಹಣ ಪಡೆದು ಮೋಸ ಮಾಡುತ್ತಿದ್ದ ಅಂತರಾಷ್ಟ್ರೀಯ ಸೈಬರ್ ವಂಚಕರ ತಂಡವೊಂದನ್ನು ಉತ್ತರಕನ್ನಡ ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.ಕಳೆದ ಏಳು ತಿಂಗಳ ಹಿಂದೆ ಹೊನ್ನಾವರ ಮೂಲದ ಯುವತಿಯೋರ್ವಳನ್ನು ಈ ಮೇಲ್ ಮೂಲಕ ಸಂಪರ್ಕಿಸಿದ ತಂಡವೊಂದು ಅಮೇರಿಕಾದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಬರೊಬ್ಬರಿ 57 ಲಕ್ಷ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿತ್ತು.

ಈ ಬಗ್ಗೆ ಯುವತಿ ಫೆ. 10 ರಂದು ಕಾರವಾರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.ಬರೊಬ್ಬರಿ ಅರ್ಧ ಕೋಟಿ ಹಣ ಕಳೆದುಕೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಬದರಿನಾಥ ಅವರು ಸಿಇಎನ್ ಪೊಲೀಸ್ ಠಾಣೆಯ ಸಿಪಿಐ ಪಿ. ಸೀತಾರಾಮ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ತನಿಖೆಗೆ ಸೂಚಿಸಿದ್ದರು.

ಅದರಂತೆ ಬರೊಬ್ಬರಿ ಒಂದು ತಿಂಗಳುಗಳ ಜಾಲಾಡಿದ ಪೋಲೀಸರು ನೈಜೀರಿಯಾ ಮೂಲದ ಗ್ಯಾಂಗ್ ಬೆಂಗಳೂರಿನಲ್ಲಿ ಇದ್ದು ಮೋಸ ಮಾಡಿರುವುದನ್ನು ಪತ್ತೆ ಹಚ್ಚಿದ್ದರು. ಅದರಂತೆ ಬೆಂಗಳೂರಿಗೆ ತೆರಳಿ ಕಾರ್ಯಾಚರಣೆ ನಡೆಸಿದ ತಂಡ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ. ಕೋಲಾರದ ವಸಂತ ನಗರದ ಅಶೋಕ ಎಂ.ಎನ್, ಆಸ್ಸಾಂ ಮೂಲದ ಬುಲ್ಲಿಯಾಂಗಿರ್ ಹಲಮ್, ತ್ರಿಪುರದ ದರ್ಟಿನ್ಬಿರ್ ಹಲಮ್, ಮಣಿಪುರದ ವಾರಿಂಗಮ್ ಪೂಂಗಶೊಕ್ ಬಂಧಿತ ಆರೋಪಿಗಳಾಗಿದ್ದಾರೆ.

ನೈಜೀರಿಯಾ ಮೂಲದ ಇಬ್ಬರು ಹಾಗೂ ಅಸ್ಸಾಂ ಮೂಲದ ಇಬ್ಬರು ಭಾಗಿಯಾಗಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದು ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ.ಇನ್ನು ಬಂಧಿತರಿಂದ ವಿವಿಧ ಬ್ಯಾಂಕ್ ಖಾತೆಯಲ್ಲಿದ್ದ 2.61 ಲಕ್ಷ, ನಗದು ಹಣ 24 ಸಾವಿರ, ಸ್ವೈಪ್ ಮಶೀನ್, ಬಯೋಮೆಟ್ರಿಕ್ ಪಿಂಗರ್ ಪ್ರಿಂಟ್, 34 ಬ್ಯಾಂಕ್ ಅಕೌಂಟ್, 24 ವಿವಿಧ ಬ್ಯಾಂಕ್ ಎಟಿಎಂ, 24 ಚೆಕ್ ಬುಕ್, 23 ಮೊಬೈಲ್, 2 ಲ್ಯಾಪ್ ಟಾಪ್, 17 ಸಿಮ್ ಕಾರ್ಡ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ನೈಜೀರಿಯಾ ಮೂಲದ ಗ್ಯಾಂಗ್ ಇಂತದೊಂದು ದೊಡ್ಡ ಸೈಬರ್ ಕ್ರೈಮ್ ನಡೆಸಿದೆ. ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದಿದ್ದು ಇನ್ನು ಹಲವರು ಇದರಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆ ಪೂರ್ಣಗೊಂಡ ಬಳಿಕವೇ ಆರೋಪಿಗಳ ಕೃತ್ಯ ಹೊರಬರಲಿದೆ ಎಂದು ಹೇಳಿದರು.

ಇನ್ನು ಆರೋಪಿತರ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಸಿ.ಇ.ಎನ್ ಅಪರಾಧ ಪೋಲೀಸ ಠಾಣಾ ನಿರೀಕ್ಷಕ ಸೀತಾರಾಮ ಪಿ ನೇತೃತ್ವದ ಸಿಬ್ಬಂದಿಗಳಾ ಉಮೆಶ ನಾಯ್ಕ, ಸುದರ್ಶನ ನಾಯ್ಕ, ನಾಗರಾಜ ನಾಯ್ಕ, ಮಂಜುನಾಥ ಹೆಗಡೆ , ಹನುಮಂತ ಕಭಾಡಿ, ನಾರಾಯಣ ಎಮ್, ಎಸ್. ಚಂದ್ರಶೇಖರ ಪಾಟೀಲ್, ಸುರೇಶ ನಾಯ್ಕ, ಸಂದೀಪ್ ನಾಯ್ಕ, ಶಿವಾನಂದ ತಾನಪಿ, ಭರತೇಶ ಸದಲಗಿ ಹಾಗೂ ಜಿಲ್ಲಾ ಪೊಲೀಸ ಕಛೇರಿ ಸಿಬ್ಬಂದಿಗಳಾದ ಸುಧೀಲೆ ಮಡಿವಾಳ, ರಮೇಶ ನಾಯ್ಕ ಅವರಿಗೆ ಅಭಿನಂದಿಸಿದ್ದಾರೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ಪರಸ್ತ್ರೀಯರ ವ್ಯಾಮೋಹ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

ವಿಸ್ಮಯ ನ್ಯೂಸ್, ಕಾರವಾರ

Exit mobile version