ಹೊನ್ನಾವರ: ತಾಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯ ಅಗ್ರಹಾರ ಹಳದಿಪುರ ಗ್ರಾಮದಲ್ಲಿರುವ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ದೇವರ ಉತ್ಸವ ಮೂರ್ತಿ ಪಕ್ಕದಲ್ಲಿ ಹರಿವಾಣದಲ್ಲಿ ತೆಗೆದಿಟ್ಟಿದ್ದ ದೇವರ ಚಿನ್ನಾಭರಣ ಇತ್ತಿಚೆಗೆ ಕಳ್ಳತನವಾಗಿತ್ತು. ದೇವಸ್ಥಾನದ ಬಾಗಿಲು ಮುರಿದ ದುಷ್ಕರ್ಮಿ ಕಳ್ಳತನ ಮಾಡಿಕೊಂಡು ಹೋಗಿದ್ದ. ಈ ಸಂಬಂಧ ಮಾರ್ಚ್ 1 ರಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ©Copyright reserved by Vismaya tv . ತನಿಖೆ ಆರಂಭಿಸಿದ ಪೊಲೀಸರು ಇದೀಗ ಈ ಪ್ರಕರಣವನ್ನು ಬೇಧಿಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಅನಿಲ್ ರಾಯ್ಕರ ಎಂದು ಗುರುತಿಸಲಾಗಿದೆ. ಈತ ಹೊನ್ನಾವರ ಕರ್ಕಿಯ ಸೋನಾರಕೇರಿಯ ನಿವಾಸಿ ಎಂದು ತಿಳಿದುಬಂದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ದಸ್ತಗಿರಿ ಮಾಡಿ ಅರೋಪಿಯಿಂದ ಕಳುವಾದ ಸುಮಾರು ರೂ.84000/- ಮೌಲ್ಯದ 21 ಗ್ರಾಂ ಚಿನ್ನ ವನ್ನು ಹಾಗೂ ರೂ.4000 /- ಮೌಲ್ಯದ ಮೊಬೈಲ್ ಪೋನ್ ನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ದೇವಸ್ಥಾನ ಕಳ್ಳತನ ಪ್ರಕರಣದ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಅಧಿಕಾರಿ, ಸಿಬ್ಬಂದಿಯವರಿಗೆ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಕಾರವಾರ ರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ಪರಸ್ತ್ರೀಯರ ವ್ಯಾಮೋಹ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888
ವಿಸ್ಮಯ ನ್ಯೂಸ್, ಹೊನ್ನಾವರ