ಪೊಲೀಸರ ಕಾರ್ಯಾಚರಣೆ: 26 ವರ್ಷದ ಬಳಿಕ ಕೊಲೆಯತ್ನ ಆರೋಪಿ ಬಂಧನ!

ಮುರ್ಡೇಶ್ವರ: ಇಲ್ಲಿನ ನ್ಯಾಶನಲ್ ಹೈಸ್ಕೂಲ್ ಬಳಿ 1995 ರಲ್ಲಿ ನಡೆದ ಕೊಲೆಯತ್ನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ಪರಾರಿಯಾಗಿದ್ದ ಆರೋಪಿಯನ್ನ 26 ವರ್ಷಗಳ ಬಳಿಕ ಬಂಧಿಸುವಲ್ಲಿ ಮುರ್ಡೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ. ಭಟ್ಕಳದ ಮದಿನಾ ಕಾಲೋನಿ ನಿವಾಸಿ ನಜೀರ್ ಅಹ್ಮದ್(48) ಬಂಧಿತ ಆರೋಪಿಯಾಗಿದ್ದು , ಈತ ಪ್ರಕರಣದ ನಂತರ ಮುಂಬೈ ಮತ್ತು ದುಬೈಯಲ್ಲಿ ತಲೆಮರೆಸಿಕೊಂಡಿದ್ದ.

ಈತನನ್ನು ಭಟ್ಕಳ ಪೊಲೀಸ್ ವೃತ್ತ ನಿರೀಕ್ಷರಾದ ದಿವಾಕರ ಪಿ.ಎಮ್‌ರವರ ನೇತೃತ್ವದಲ್ಲಿ ಮುರ್ಡೇಶ್ವರ ಪಿ.ಎಸ್.ಐ ರವೀಂದ್ರ ಬಿರಾದಾರ, ಸಿಬ್ಬಂದಿಗಳಾದ ಮಂಜುನಾಥ ಗೌಡರ ಎ.ಎಸ್.ಐ, ಭಟ್ಕಳ ಗ್ರಾಮೀಣ ಮೊಲೀಸ್ ಠಾಣೆ, ನಾಗರಾಜ ಮೊಗೇರ ಸಿ.ಹೆಚ್.ಸಿ, ಭಟ್ಕಳ ಶಹರ ಪೊಲೀಸ್ ಠಾಣೆ, ಶ್ರೀ ಲಕ್ಷಣ ಪೂಜಾರಿ, ಸಿ.ಪಿ.ಸಿ, ಮುರ್ಡೇಶ್ವರ ಪೊಲೀಸ್ ಠಾಣೆ ಇವರನ್ನೊಳಗೊಂಡ ತಂಡವು ಈತನನ್ನು ದಸ್ತಗಿರಿ ಮಾಡಿದೆ. ಈತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ಪರಸ್ತ್ರೀಯರ ವ್ಯಾಮೋಹ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version