Info
Trending

STD ರಮೇಶ ನಾಯ್ಕ ವಿಧಿವಶ: ಸಾಮಾಜಿಕ ಕಾರ್ಯಕರ್ತ,ಸ್ನೇಹ ಜೀವಿ ಇನ್ನಿಲ್ಲ

ಅಂಕೋಲಾ: ಪಟ್ಟಣದ ಬಂಡಿ ಬಝಾರ ನಿವಾಸಿ ರಮೇಶ ತುಕ್ಕಪ್ಪ ನಾಯ್ಕ (58) ಬುಧವಾರ ಬೆಳಿಗ್ಗೆ ಸ್ವಗೃಹದಲ್ಲಿ ವಿಧಿವಶರಾದರು.ಅನಾರೋಗ್ಯದಿಂದ ಅವರು ಇತ್ತೀಚೆಗೆ ಹಾಸಿಗೆ ಹಿಡಿದಿದ್ದರು.  STD ರಮೇಶಃ ಆಧುನಿಕ ಜಗತ್ತಿನಲ್ಲಿ ಮೊಬೈಲ್ ಬರುವುದಕ್ಕೂ ಪೂರ್ವ ಕೆಲ ಸಿರಿವಂತರ ಮನೆಯಲ್ಲಿದ್ದ ಸ್ಥಿರ ದೂರವಾಣಿ ಹೊರತು ಪಡಿಸಿ, ಸಾರ್ವಜನಿಕ ಟೆಲಿಫೋನ್ ಬೂತಗಳೇ  (STD ಬೂತ್ ) ಹಲವರ ಸಂಪರ್ಕ ಮಾಧ್ಯಮವಾಗಿ ಗುರುತಿಸಿ ಕೊಂಡ ಮಹತ್ತರ ಕಾಲ ಘಟ್ಟದಲ್ಲಿಯೇ ಅಂಕೋಲಾದ ಜೈ ಹಿಂದ್ ಲಾಡ್ಜ್ ಎದುರು ಟೆಲಿಫೋನ್ ಬೂತ್ ಆರಂಭಿಸಿ STD ರಮೇಶಣ್ಣಎಂದೇ ಪರಿಚಿತರಾಗಿದ್ದರು. 

ಅನ್ಯರಾಜ್ಯದಲ್ಲಿ ತನಗೆ ದೊರೆಯಲಿದ್ದ ಉತ್ತಮ ಸೌಕರಿಯೊಂದನ್ನು ಅದಾವುದೋ ಕಾರಣದಿಂದ ಬಿಟ್ಟು ಬಂದಿದ್ದ ರಮೇಶ ನಾಯಕ, ಊರಿನಲ್ಲಿಯೇ ಸ್ವಂತ ಉದ್ಯೋಗ ಕೈಗೊಂಡು, ಎಲ್ಲ ಜಾತಿ, ಜನಾಂಗದವರೊಂದಿಗೆ  ಪ್ರೀತಿ ವಿಶ್ವಾಸದಿಂದ ಸ್ನೇಹ ಜೀವಿಯಾಗಿ ಬಾಳಿ ಬದುಕಿದ್ದರು.       

 ಪುರಸಭೆ ಎದುರಿನ ಔಷಧ ಅಂಗಡಿಯೊಂದರಲ್ಲಿಯೂ   ಮೇಲ್ವಿಚಾರಕರಾಗಿ ‘ಕೆಲಕಾಲ ಕರ್ತವ್ಯ ನಿರ್ವಹಿಸಿದ್ದ ರಮೇಶ ನಾಯ್ಕ, ಹಳೇ ಬಜಾರದ ಶ್ರೀಗಣಪತಿ ದೇವರ ಭಜನಾ  ಉತ್ಸವ, ಸಂಗೀತ ರಸಮಂಜರಿ, ನಾಟಕದಲ್ಲಿ ಹಲವು ವರ್ಷ ಮುಂದಾಳತ್ವ ವಹಿಸಿದ್ದರು.  ನಾಮಧಾರಿ ಸಮಾಜದ ಪ್ರಮುಖ ರಾಗಿ, ಸಮಾಜದ  ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ, ಸಾಮಾಜಿಕ ಕಾರ್ಯಗಳಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದ್ದರು.       

ಮೃತ ರಮೇಶ ನಾಯ್ಕ, ತಾಯಿ ಗಿರಿಜಾ ನಾಯ್ಕ ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷರಾಗಿದ್ದು, ಸಹೋದರ ವಿಶ್ವನಾಥ ನಾಯ್ಕ ಪುರಸಭೆಯ ಹಾಲಿ ಸದಸ್ಯರಾಗಿದ್ದಾರೆ. ಇನ್ನೋರ್ವ ಸಹೋದರ ಚಂದ್ರಕಾಂತ ನಾಯ್ಕ ಪಿಗ್ಮಿ ಸಂಗ್ರಹಕಾರರಾಗಿ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದು, ತುಕ್ಕಪ್ಪ ನಾಯ್ಕ ಕುಟುಂಬ ಸಾರ್ವಜನಿಕ ಮತ್ತು  ರಾಜಕೀಯ  ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದೆ.                                     

ರಮೇಶ ನಾಯ್ಕ ನಿಧನದ ಸುದ್ದಿ ತಿಳಿಯುತ್ತಲೇ    ಪಟ್ಟಣದ ಕೆಲ ಗಣ್ಯರು, ಪುರಸಭಾ ರಾದ ಜಯ ಪ್ರಕಾಶ್ ನಾಯ್ಕ, ಮಂಜುನಾಥ ನಾಯ್ಕ ಇತರೆ ಕೆಲ ಜನಪ್ರತಿನಿಧಿಗಳು, ಇತರೇ ಪ್ರಮುಖರು, ಕುಟುಂಬದ ಆಪ್ತರು  ಆಗಮಿಸಿ  ಮೃತರ ಅಂತಿಮ ದರ್ಶನ ಪಡೆದರು.   ಮೃತರು, ಪತ್ನಿ ಗೀತಾ ರಮೇಶ ನಾಯ್ಕ, ಮಗ ವಿಷೇಶ್ವರ,ಮಗಳು ತೇಜಸ್ಸಿನಿ ಸೇರಿದಂತೆ ಅಪಾರ ಬಂಧು ಬಳಗ ತೊರೆದಿದ್ದಾರೆ. ರಮೇಶ ನಾಯ್ಕ  ನಿಧನಕ್ಕೆ ಮಾಜಿ ಶಾಸಕ ಸತೀಶ್ ಸೈಲ್ ಸೇರಿದಂತೆ ಹಲವು ಗಣ್ಯರು, ಸಮಾಜದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.. 

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button