ವಿವಿಧೆಡೆ 400ಕ್ಕೂ ಹೆಚ್ಚು ಬೈಕ್ ವಶಕ್ಕೆ: ಅಪಾರ ಪ್ರಮಾಣದ ದಂಡ ವಸೂಲಿ: ಅವನಶ್ಯಕವಾಗಿ ಓಡಾಡುತ್ತಿರುವವರಿಗೆ ಬಿಸಿ ಮುಟ್ಟಿಸುತ್ತಿರುವ ಪೊಲೀಸರು
ಕಾರವಾರ: ರಾಜ್ಯಾದ್ಯಂತ ತ್ವರಿತಗತಿಯಲ್ಲಿ ಹಬ್ಬುತ್ತಿರುವ ಕರೋನಾ ಎರಡನೆ ಅಲೆಯ ನಿಯಂತ್ರಣಕ್ಕಾಗಿ ಸರಕಾರವು ಲಾಕ್‌ಡೌನ್ ಜಾರಿಗೊಳಿಸಿದೆ. ಆದರೆ ಇದಾವೂದಕ್ಕೂ ಖ್ಯಾರೆ ಎನ್ನದೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಕುಮಟಾ, ಹೊನ್ನಾವರ ಮುಂತಾದ ತಾಲೂಕಿನಲ್ಲಿ ಅನಾವಶ್ಯಕವಾಗಿ ಒಡಾಡುತ್ತಿರುವ ಸಾರ್ವಜನಿಕರಿಗೆ ಪೊಲೀಸರು ಬಿಸಿ ಮುಟ್ಟಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಶಿರಸಿ ತಾಲೂಕಿನಲ್ಲಿ ಒಂದೇ ದಿನಕ್ಕೆ ನಾಲ್ಕು ಚಕ್ರ, ಮೂರು ಚಕ್ರ, ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟೂ 75 ಕ್ಕೂ ಹೆಚ್ಚು ವಾಹನಗಳನ್ನು ಸೀಜ್ ಮಾಡಿದ್ದು 60 ಸಾವಿರಕ್ಕೂ ಹೆಚ್ಚಿನ ದಂಡವನ್ನು ವಿಧಿಸಿ ಬೇಕಾಬಿಟ್ಟಿ ಓಡಾಡುವವರಿಗೆ ಶಾಕ್ ನೀಡಿದ್ದಾರೆ. ಶಿರಸಿ ಡಿವೈಎಸ್‌ಪಿ ರವಿ ನಾಯ್ಕರವರ ಆದೇಶದ ಮೇರೆಗೆ ಶಿರಸಿ ನಗರ ಠಾಣೆ ಪಿಎಸ್‌ಐ ರಾಜಕುಮಾರ್ 22 ವಾಹನಗಳನ್ನು ಸೀಜ್ ಮಾಡಿದ್ದು 5 ಸಾವಿರ ದಂಡವನ್ನು ವಿಧಿಸಿದ್ದಾರೆ.
ಮಾರುಕಟ್ಟೆ ಠಾಣೆ ಪಿಎಸ್‌ಐ ಭೀಮಾಶಂಕರ 26 ವಾಹನಗಳನ್ನು ಸೀಜ್ ಮಾಡಿ 13 ಸಾವಿರ ದಂಡವನ್ನು ವಿಧಿಸಿದ್ದಾರೆ. ಗ್ರಾಮೀಣ ಠಾಣೆಯ ಪಿಎಸ್‌ಐ ಈರಯ್ಯ 5 ವಾಹನಗಳನ್ನು ಸೀಜ್ ಮಾಡಿ 4 ಸಾವಿರ ರೂ ದಂಡ ವಿಧಿಸಿದ್ದಾರೆ. ಬನವಾಸಿ ಪಿಎಸ್‌ಐ ಬಾಲಕೃಷ್ಣ ಪಾಲೇಕರ್ 6 ವಾಹನವನ್ನು ಸೀಜ್ ಮಾಡಿ 5 ಸಾವಿರ ರೂ ದಂಡ, ಮುಂಡಗೋಡ ಪಿಎಸ್‌ಐ ಬಸವರಾಜ್ 11 ವಾಹನಗಳನ್ನು ಸೀಜ್ ಮಾಡಿ 6 ಸಾವಿರ ರೂ ದಂಡ, ಯಲ್ಲಾಪುರ ಠಾಣೆ ಪಿಎಸ್‌ಐ ಮಂಜುನಾಥ ಗೌಡರ್ 5 ವಾಹನ ಸೀಜ್ ಮಾಡಿ 5 ಸಾವಿರ ರೂ ದಂಡ ಹಾಗೂ ಸಿದ್ದಾಪುರ ಪಿಎಸ್‌ಐ ಮಹಾಂತೇಶ ಕುಮಾರ 9 ವಾಹನಗಳನ್ನು ಸೀಜ್ ಮಾಡಿ 6 ಸಾವಿರ ರೂ ದಂಡ ವಿಧಿಸಿದ್ದಾರೆ.
ಅಂತೇಯೆ ಹೊನ್ನಾವರ ತಾಲೂಕಿನಲ್ಲಿ ಅನಾವಶ್ಯಕ ಓಡಾಟ ನಡೆಸುತ್ತಿರುವವರ ಮೇಲೆ ಪ್ರಕರಣ ಸಹ ದಾಖಲಿಸಲಾಗಿದೆ. ಬೇಕಾಬಿಟ್ಟಿಯಾಗಿ ರೋಡಿಗಿಳಿದ 70 ಕ್ಕೂ ಹೆಚ್ಚು ಬೈಕ್‌ಗಳನ್ನು ಹೊನ್ನಾವರ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಲಾಕ್‌ಡೌನ್ ನಿಯಮ ಮೀರಿ ಕ್ರಿಕೆಟ್ ಆಡುತ್ತಿದ್ದ 6 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಕುಮಟಾ ತಾಲೂಕಿನಲ್ಲಿ ಕರೋನಾ 2 ನೇ ಅಲೆಯ ಲಾಕ್‌ಡೌನ್ ಪ್ರಾರಂಭವಾದಾಗಿನಿoದ ಇದುವರೆಗೆ ಸುಮಾರು 300 ಕ್ಕೂ ಅಧಿಕ ವಾಹನಗಳಿಗೆ ದಂಡ ವಿಧಿಸಲಾಗಿದೆ. ಅಲ್ಲದೆ 150 ಕ್ಕೂ ಅಧಿಕ ಬೈಕ್‌ಗಳನ್ನು ಸೀಜ್ ಮಾಡಿ ನಂತರ ಬಿಡಲಾಗಿದೆ ಎಂದು ತಿಳಿದುಬಂದಿದೆ.
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..
ಬ್ಯರೋ ರಿಪೋರ್ಟ್, ವಿಸ್ಮಯ ನ್ಯೂಸ್.