ಅಂಕೋಲಾದ ಸಂಪತ್ ವರ್ಗಾವಣೆ : ಚಿತ್ತಾಕುಲದಲ್ಲಿ ನಿಭಾಯಿಸಬೇಕಿದೆ ರಕ್ಷಣೆ? ಅದಲು ಬದಲಾದ ಯುವ ಅಧಿಕಾರಿಗಳು
ಅಂಕೋಲಾ:ಪಶ್ಚಿಮ ವಲಯ ಮಂಗಳೂರು ವಿಭಾಗದ 11 ಪಿಎಸ್ಐ ರವರನ್ನು ವರ್ಗಾಯಿಸಿ ಪೊಲೀಸ್ ಮಹಾನಿರೀಕ್ಷಕ ರಾದ ದೇವ ಜ್ಯೋತಿ ರೇ ವರ್ಗಾವಣೆ ಆದೇಶ ಹೊರಡಿಸಿದ್ದಾರೆ.ವರ್ಗಾವಣೆ ಪಟ್ಟಿಯಲ್ಲಿ ಅಂಕೋಲದಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದ (ಪಿಎಸ್ಐ 1)ಸಂಪತ್ ಈಸಿ ಸಹ ಒಬ್ಬರಾಗಿದ್ದಾರೆ.
10 ನವೆಂಬರ್ 2019ರಲ್ಲಿ ಅಂಕೋಲಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದ ಈ ಸಿ ಸಂಪತ್ 19 ತಿಂಗಳ ಸೇವಾ ಅವಧಿಯಲ್ಲಿ ತಾಲೂಕಿನ ಬಹುತೇಕ ಜನತೆಯ ನೆಚ್ಚಿನ ಅಧಿಕಾರಿಯಾಗಿ ಇಲಾಖಾ ಕರ್ತವ್ಯದ ಜೊತೆಯಲ್ಲಿ ಇತರೆ ಹತ್ತಾರು ವಿಧಾಯಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿದ್ದರು. ಮಾನವೀಯ ನೆಲೆಯಲ್ಲಿಯೂ ಇವರು ತೋರಿದ ಪ್ರೀತಿ ಹಾಗೂ ಅಂತಃಕರಣದ ಭಾವನೆಗಳು ನಿಜಕ್ಕೂ ಸ್ಮರಣೀಯ.
ಲಾಕ್ ಡೌನ್, ಇತರೆ ಸಾವು – ನೋವಿನ ಪ್ರಕರಣಗಳು, ಮತ್ತಿತರ ತುರ್ತು ಸಂದರ್ಭಗಳ ನಿರ್ವಹಣೆ ವೇಳೆ ಅತ್ಯಂತ ಚುರುಕಾಗಿ ಜವಾಬ್ದಾರಿ ನಿಭಾಯಿಸಿ, ತೋರಿದ ಜನಪರ ಕಾಳಜಿ ಮೆಚ್ಚಲೇಬೇಕಿದೆ.
ಸಂಪತ್ ಅವರನ್ನು ಅಂಕೋಲಾ ಠಾಣೆಯಿಂದ ಕಾರವಾರ ತಾಲೂಕಿನ ಚಿತ್ತಾಕುಲ ಠಾಣೆಗೆ ವರ್ಗಾಯಿಸಲಾಗಿದ್ದು , ಇದೇ ಈ ವೇಳೆ ಚಿತ್ತಾಕುಲದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರವೀಣ್ ಕುಮಾರ್ ಅವರನ್ನು,ಅಂಕೋಲಾಕ್ಕೆ ವರ್ಗಾಯಿಸಲಾಗಿದೆ. ಪ್ರವೀಣ ಕುಮಾರ ಸಹ ಯುವ ಅಧಿಕಾರಿಯಾಗಿ ಜನಮೆಚ್ಚುಗೆ ಗಳಿಸಿದಂತಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ