Follow Us On

WhatsApp Group
Info
Trending

ಅಂಕೋಲಾದಲ್ಲಿ ನಾಳೆ ಲಭ್ಯವಿರುವ ವಾಕ್ಸಿನ್ ವಿವರ: ಎಲ್ಲೆಲ್ಲಿ ಎಷ್ಟು ಲಸಿಕೆ ಇದೆ ನೋಡಿ?

ಅಂಕೋಲಾ ಜುಲೈ 22: ತಾಲೂಕಿನಲ್ಲಿ ಗುರುವಾರ 8 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವುದರೊಂದಿಗೆ, ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 75 ಕ್ಕೆ ಏರಿಕೆಯಾಗಿದೆ. ಸೋಂಕು ಮುಕ್ತರಾದ 12 ಜನರನ್ನು ಬಿಡುಗಡೆಗೊಳಿಸಲಾಗಿದೆ . ವಿವಿಧ ಆಸ್ಪತ್ರೆಗಳಲ್ಲಿ 8 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಲಕ್ಷಣವುಳ್ಳ 69 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ.

ತಾಲೂಕಿನ ವಿವಿಧೆಡೆ ಜುಲೈ 23 ರ ಶುಕ್ರವಾರ ಒಟ್ಟೂ 800 ಡೋಸ್ ಲಸಿಕೆ ವಿತರಣೆಗೆ ಆರೋಗ್ಯ ಇಲಾಖೆ ಕ್ರಮಕೈಗೊಂಡಿದೆ. ಚಂದುಮಠ (100), ವಂದಿಗೆ (150), ಬೆಲೇಕೇರಿ (150), ಹಾರವಾಡ (100), ಸುಂಕಸಾಳ (50), ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನ(250) ಲಸಿಕೆ ವಿಂಗಡಣೆ ಮಾಡಿ ವಿತರಿಸಲಾಗುತ್ತಿದೆ.

ಈ ಹಿಂದೆ ಮೊದಲ ಡೋಸ್ ಪಡೆದವರು, ಲಸಿಕೆ ಪಡೆದ ದಿನಾಂಕದಿಂದ,16ಕ್ಕೂ ಹೆಚ್ಚು ವಾರಗಳಾಗಿದ್ದಲ್ಲಿ ಅವರಿಗೆ ಪ್ರಥಮ ಪ್ರಾಶಸ್ತ್ಯ, 12ಕ್ಕೂ ಹೆಚ್ಚು ವಾರಗಳಾಗಿದ್ದಲ್ಲಿ ದ್ವಿತೀಯ ಪ್ರಾಶಸ್ತ್ಯದಡಿ 2 ಹಂತದ ಲಸಿಕೆ ನೀಡಲಾಗುತ್ತಿದೆ.

ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶಿಕ್ಷಕರು,ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಇತರೆ ಸಿಬ್ಬಂದಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಫಾರ್ಮ್ ನಂಬರ್ 3 ತಂದರೆ ಅಂಥವರಿಗೆ ಅಗತ್ಯ ಇರುವ 1 ನೇ ಇಲ್ಲವೆ 2 ನೇ ಡೋಸ್ ಲಸಿಕೆ ನೀಡಲಾಗುತ್ತದೆ. ಅಂತೆಯೇ ನಾನಾ ಕಾಲೇಜಿಗಳಲ್ಲಿ ಈ ಹಿಂದೆ ವ್ಯಾಕ್ಸಿನೇಷನ್ ಕ್ಯಾಂಪ್ ನಡೆದಾಗ ಅನಿವಾರ್ಯ ಕಾರಣಗಳಿಂದ ಲಸಿಕೆ ಹಾಕಿಸಿಕೊಳ್ಳಲಾಗದ ವಿದ್ಯಾರ್ಥಿಗಳು,ತಮ್ಮ ಕಾಲೇಜಿನ ಮುಖ್ಯಸ್ಥರಿಂದ ಫಾರ್ಮ್ ನಂಬರ್ 3 ತಂದು ಮೊದಲ ಡೋಸ್ ಪಡೆಯಬಹುದಾಗಿದೆ.

ವಿಶೇಷ ಪ್ರಾಶಸ್ತ್ಯದಡಿ ಬಾಳಂತಿಯರೂ ಮೊದಲ ಇಲ್ಲವೇ ಎರಡನೆ ಹಂತದ ಲಸಿಕೆ ಪಡೆದುಕೊಳ್ಳಬಹುದಾಗಿದೆ ಎಂದು ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button